)
Foods to Avoid with Chicken : ಚಿಕನ್ ತಿನ್ನುವುದು ದೇಹಕ್ಕೆ ಒಳ್ಳೆಯದು, ಇದು ನಿಮ್ಮ ದೇಹಕ್ಕೆ ಅಗತ್ಯ ಪ್ರೊಟೀನ್ ನೀಡುತ್ತದೆ. ಆದರೆ ಚಿಕನ್ ತಿಂದ ನಂತರ ಕೆಲವು ಪದಾರ್ಥಗಳನ್ನು ತಿನ್ನುವುದು ಒಳ್ಳೆಯದಲ್ಲ, ಅಕಸ್ಮಾತಾಗಿ ತಿಂದರೆ ಇದರಿಂದ ನಿಮ್ಮ ದೇಹದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ.ಆದ್ದರಿಂದ ನೀವು ಈ ರೀತಿಯ ಆಹಾರಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಮುಖ್ಯ.
ಮಾಂಸ ಸೇವನೆ ಆರೋಗ್ಯಕ್ಕೆ ಒಳ್ಳೆಯಾದರೂ ಸಹ ಅದನ್ನು ತಿನ್ನುವ ರೀತಿಯಲ್ಲಿ ಸ್ವಲ್ಪ ಜಾಗರೂಕತೆ ವಹಿಸಬೇಕು, ಅದರಲ್ಲೂ ಚಿಕನ್ ತಿನ್ನುವಾಗ ಕೆಲವು ಆಹಾರ ಖಾದ್ಯಗಳನ್ನು ತಿನ್ನದೇ ಇದ್ದರೆ ಒಳ್ಳೆಯದು. ಏಕೆಂದರೆ ಇಂತಹ ಆಹಾರಗಳಿಂದ ದೇಹದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು ಇಲ್ಲಿವೆ.
ಮೀನು:
ಚಿಕನ್ ಮೀನು ಎರಡೂ ಮಾಂಸವಾಗಿದ್ದರೂ ಇವೆರೆಡರ ಮಧ್ಯೆ ಕೆಲವು ವ್ಯತ್ಯಾಸಗಳಿವೆ. ಎರಡು ನಮ್ಮ ದೇಹಕ್ಕೆ ಪ್ರೊಟೀನ್ ಒದಗಿಸುತ್ತವೆ.ಆದರೆ ಅವೆರಡರಲ್ಲೂ ಇರುವ ಪ್ರೊಟೀನ್ ವಿಭಿನ್ನ, ಆದ ಕಾರಣ ನಾವು ಚಿಕನ್ ತಿಂದಮೇಲೆ ಅಥವಾ ತಿನ್ನುವುದರ ಜೊತೆಗೆ ಮೀನು ತಿನ್ನುವುದು ಒಳ್ಳೆಯದಲ್ಲ. ಇದರಿಂದ ಅಲರ್ಜಿ ಅಥವಾ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.
ಜೇನುತುಪ್ಪ:
ಕೆಲವು ಬಾರಿ ಊಟ ಮಾಡಿದ ಮೇಲೆ ಆಹಾರ ಸರಿಯಾಗಿ ಜೀರ್ಣವಾಗಲು ಬಿಸಿನೀರಿಗೆ ಜೇನುತುಪ್ಪ ಹಾಕಿಕೊಂಡು ಕೊಡಿಯುವವರನ್ನು ನಾವು ನೋಡಿದ್ದೆವೆ ಆದರೆ ಇದು ಎಲ್ಲ ಆಹಾರಗಳೊಂದಿಗೆ ಹೊಂದಿಕೊಳ್ಳುವುದಿಲ್ಲ. ಚಿಕನ್ ತಿಂದ ತಕ್ಚಣ ನೀವೆನಾದರೂ ಜೇನುತುಪ್ಪ ಸೇವಿಸಿದರೇ ಹೊಟ್ಟೆ ನೋವು ಬರುವ ಸಾಧ್ಯತೆ ಹೆಚ್ಚು, ಏಕೆಂದರೆ ಜೇನುತುಪ್ಪ ಬೇಗ ಜೀರ್ಣ ಆಗುವುದಿಲ್ಲ, ಅಷ್ಟೇ ಅಲ್ಲದೆ ಮಾಂಸ ಕೂಡ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇವೆರೆಡನ್ನು ಒಟ್ಟಿಗೆ ಸೇವಿಸಿದಾಗ ಜೀರ್ಣಕ್ರಿಯೆಗೆ ಹೆಚ್ಚಿನ ತೊಂದರೆಯಾಗುತ್ತದೆ.
ಹಾಲು:
ರಾತ್ರಿ ಊಟ ಮಾಡಿದ ಮೇಲೆ ಸರಿಯಾಗಿ ನಿದ್ದೆ ಮಾಡಲು ಒಂದು ಲೋಟ ಹಾಲು ಕುಡಿಯುವವರು ಬಹಳ ಜನ, ಆದರೆ ಒಂದು ವೇಳೆ ನೀವು ರಾತ್ರಿ ಊಟದಲ್ಲಿ ಚಿಕನ್ ತಿಂದರೆ ಹಾಲು ಕುಡಿಯಬೇಡಿ, ಎರಡು ಪದಾರ್ಥಗಳಲ್ಲಿರುವ ಪೋಷಕಾಂಶಗಳು ಒಂದೇ ಆಗಿರುವುದಿಲ್ಲ, ಆದ್ದರಿಂದ ಇವೆರೆಡನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಸೂಚನೆ: ಈ ಮೇಲಿನ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ.ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ