ಬೆಂಗಳೂರು: Artificial Ripening Of Mangoes : ಮಾವಿನ ಹಣ್ಣನ್ನು ಇಷ್ಟಪಡದವರು ಬಹಳ ವಿರಳ. ಸಿಹಿ, ರಸಭರಿತ ಮಾವಿನ ಹಣ್ಣುಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆ ಹಣ್ಣಿನ ಬಣ್ಣ ಎಂಥವರನ್ನು ಕೂಡಾ ತನ್ನತ್ತ ಆಕರ್ಷಿಸಿ ಬಿಡುತ್ತವೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಮಾವು ರಾಸಾಯನಿಕಗಳ ಪ್ರಭಾವಕ್ಕೆ ಒಳಗಾಗಿದೆ. ಮಾವು ಬೇಗನೆ ಹಣ್ಣಾಗಲು ಮತ್ತು ರಸಭರಿತವಾಗಿ ಕಾಣಲು ಅನೇಕ ರಾಸಾಯನಿಕಗಳನ್ನು ಅದರಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಾವಿನ ಹಣ್ಣುಗಳನ್ನು ಖರೀದಿಸುವಾಗ, ಕೆಮಿಕಲ್ ಬಳಸದೇ ಇರುವ ಮಾವಿನಹಣ್ಣುಗಳನ್ನು ಗುರುತಿಸಬೇಕಾಗುತ್ತದೆ. ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಹಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ಇರುತ್ತದೆ.
ಅಧ್ಯಯನಗಳ ಪ್ರಕಾರ, ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣಿನ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಗ್ಯಾಸ್, ಹೊಟ್ಟೆ ಉಬ್ಬರ, ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಈ ಮಾವಿನಹಣ್ಣುಗಳು ಕಡಿಮೆ ಮಟ್ಟದ ವಿಟಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಹಾನಿಕಾರಕ ವಿಷವನ್ನು ಹೊಂದಿರಬಹುದು. ಇದು ಹೃದ್ರೋಗ, ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು. ಆದರೆ ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣಿಗೆ ಹೋಲಿಸಿದರೆ ರಾಸಾಯನಿಕವಾಗಿ ಮಾಗಿದ ಮಾವಿನಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳ ಪ್ರಮಾಣ ಕಡಿಮೆ.
ಇದನ್ನೂ ಓದಿ : ಮಧುಮೇಹಿಗಳಿಗೆ ವರದಾನ ಈ ಹಣ್ಣು.. ಊಟಕ್ಕೂ ಮೊದಲು ತಿಂದರೇ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್! ಹಾರ್ಟ್‌ಅಟ್ಯಾಕ್‌ಗೂ ಇದೇ ಮದ್ದು..
ಮಾವಿನ ಹಣ್ಣುಗಳನ್ನು ರಾಸಾಯನಿಕವಾಗಿ ಮಾಗಿಸಲಾಗಿದೆಯೇ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
1.ಬಣ್ಣದಿಂದ ಗುರುತಿಸಿ :
ಸಾಮಾನ್ಯವಾಗಿ ಮಾವಿನ ಹಣ್ಣಿನ ಬಣ್ಣ ನೋಡಿಯೇ ಖರೀದಿಸುವುದು. ಈ ಬಣ್ಣದಿಂದಲೇ ರಾಸಾಯನಿಕವನ್ನು ಕಂಡುಡಿಯಬಹುದು. ಮಾವು ನೈಸರ್ಗಿಕವಾಗಿ ಹಣ್ಣಾಗಿದ್ದರೆ ಅದರ ಬಣ್ಣ ತಿಹಿಳಿ ಹಳದಿ ಮತ್ತು ಹಸಿರು ಬಣ್ಣದ್ದಾಗಿರುತ್ತದೆ. ರಾಸಾಯನಿಕ ಬಳಸಿ ಹಣ್ಣಾಗಿಸಿದ್ದರೆ ಮಾವಿನ ಹಣ್ಣುಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತವೆ.
2.ಗುರುತು ನೋಡಿ :
ಕೆಲವು ಮಾವಿನಹಣ್ಣುಗಳ ಸಿಪ್ಪೆಯಲ್ಲಿ ನೀಲಿ, ಕಪ್ಪು ಅಥವಾ ಬಿಳಿ ಗುರುತುಗಳು ಕಾಣಿಸುತ್ತವೆ. ಅಂತಹ ಮಾವಿನ ಹಣ್ಣುಗಳನ್ನು ಖರೀದಿಸಬೇಡಿ. ರಾಸಾಯನಿಕಗಳ ಬಳಸಿರುವ ಕಾರಣದಿಂದಲೇ ಹೀಗಾಗುತ್ತದೆ.
3.ಬಕೆಟ್ ಟೆಸ್ಟ್ ಮಾಡಿ :
ಮಾವು ಖರೀದಿಸಿದ ನಂತರವೂ, ಹಲವಾರು ಸರಳ ಪರೀಕ್ಷೆಗಳನ್ನು ಮಾಡುವ ಮೂಲಕ ರಾಸಾಯನಿಕವನ್ನು ಕಂಡುಹಿಡಿಯಬಹುದು. ಮನೆಗೆ ತಂದ ಮಾವಿನ ಹಣ್ಣನ್ನೆಲ್ಲ ನೀರು ತುಂಬಿದ ಬಕೆಟ್ ಗೆ ಹಾಕಿ. ನೈಸರ್ಗಿಕವಾಗಿ ಹಣ್ಣಾಗಿರುವ ಮಾವು ನೀರಿನಲ್ಲಿ ಮುಳುಗಿ ಬಿಡುತ್ತವೆ. ಆದರೆ ರಾಸಾಯನಿಕವಾಗಿ ಹಣ್ಣಾಗಿಸಿದ ಮಾವು ನೀರಿನಲ್ಲಿ ತೇಲುತ್ತದೆ.
ಇದನ್ನೂ ಓದಿ : ಕಣ್ಣಿನ ದೃಷ್ಟಿ ದೋಷಕ್ಕೆ ಈ ಹಣ್ಣು ಸಂಜೀವಿನಿ.. ಕಣ್ಣು ಎಷ್ಟೇ ಮಂಜಾಗಿದ್ದರೂ ಶಾರ್ಪ್ ಆಗುತ್ತೆ! ವಯಸ್ಸು 70 ದಾಟಿದ್ರೂ ಕನ್ನಡಕ ಬೇಕಿಲ್ಲ!
4.ಕಟ್ ಮಾಡಿ ನೋಡಿ :
ಮಾವನ್ನು ಕತ್ತರಿಸಿದ ನಂತರ,ತಿರುಳಿನ ಬಣ್ಣವು ಏಕರೂಪದ ಹಳದಿಯಾಗಿದ್ದರೆ ಅದು ನೈಸರ್ಗಿಕವಾಗಿ ಹಣ್ಣಾಗುತ್ತದೆ. ಮಾವಿನ ಅಂಚುಗಳು ಗಾಢ ಬಣ್ಣಕ್ಕೆ ತಿರುಗಿದ್ದು, ಮಧ್ಯದಲ್ಲಿರುವ ತಿರುಳು ತಿಳಿ ಬಣ್ಣದ್ದಾಗಿದ್ದರೆ ಅಲ್ಲಿ ಕೆಮಿಕಲ್ ಬಳಕೆಯಾಗಿರುವುದು ಸ್ಪಷ್ಟ.
5.ಪರಿಮಳ :
ಮಾವಿನ ಪರಿಮಳ ಬಹಳ ಮುಖ್ಯ.ರಾಸಾಯನಿಕ ಬಳಸಿ ಮಾಗಿದ ಮಾವಿನಹಣ್ಣಿನ ಪರಿಮಳ ಬಹಳ ಕಡಿಮೆ.ಕೆಲವೊಮ್ಮೆ ಪರಿಮಳ ಇರುವುದೇ ಇಲ್ಲ. ಆದರೆ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ವಿಪರೀತ ಪರಿಮಳ ಹೊಂದಿರುತ್ತವೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









