ಮೊಟ್ಟೆಯ ಹೇರ್ ಪ್ಯಾಕ್ ಕೂದಲಿಗೆ ಅಗತ್ಯವಿರುವ ಪ್ರೋಟೀನ್‌ಗಳನ್ನು ಹಾಗೂ ಹಲವು ರೀತಿಯ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ.
ಈ ಹೇರ್ ಪ್ಯಾಕ್ ಬಳಸುವುದರಿಂದ ಕೂದಲಿಗೆ ಹಲವು ಪ್ರಯೋಜನಗಳು ದೊರೆಯುತ್ತವೆ, ವಿಶೇಷವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕೋಳಿ ಮೊಟ್ಟೆಯ ಹೇರ್ ಪ್ಯಾಕ್ ಬಳಸುವುದರಿಂದ ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ಈ ಹೇರ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೂದಲಿಗೆ ನೈಸರ್ಗಿಕ ಕೊಬ್ಬಿನಾಮ್ಲಗಳು ದೊರೆಯುತ್ತವೆ ಮತ್ತು ಅದು ಹೊಳೆಯುವಂತೆ ಮಾಡುತ್ತದೆ.
ಈ ಹೇರ್ ಪ್ಯಾಕ್‌ನಲ್ಲಿರುವ ಸಲ್ಪರ್ ತಲೆಹೊಟ್ಟು ತಡೆಗಟ್ಟುವಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ.
ಈಗಾಗಲೇ ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿರುವವರು ಖಂಡಿತವಾಗಿಯೂ ಈ ಹೇರ್ ಪ್ಯಾಕ್ ಬಳಸಬೇಕು.
ಈ ಹೇರ್ ಪ್ಯಾಕ್ ಮಾಡಲು, ಮೊದಲು ಒಂದು ಸಣ್ಣ ಬಟ್ಟಲನ್ನು ತೆಗೆದುಕೊಳ್ಳಿ. ಅದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಸಾಕಷ್ಟು ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಹಚ್ಚಿ ಹಾಗೆಯೇ ಬಿಟ್ಟ ನಂತರ, ನಿಮ್ಮ ತಲೆಯನ್ನು ಸೌಮ್ಯವಾದ ಸಾವಯವ ಶಾಂಪೂವಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಬಳಸಿದರೆ, ತಲೆಹೊಟ್ಟು ಶಾಶ್ವತವಾಗಿ ಮಾಯವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸುತ್ತದೆ, ಇದನ್ನೂ ZEE KANNADA NEWS ಕಚಿತ ಪಡಿಸುವುದಿಲ್ಲ.