ಮಜ್ಜಿಗೆಯಲ್ಲಿ ದೇಹಕ್ಕೆ ಅಗತ್ಯವಾಗಿರುವ ಕ್ಯಾಲ್ಷಿಯಂ, ಪೊಟ್ಯಾಷಿಯಂ,ವಿಟಮಿನ್ ಬಿ೧೨, ರೆಬೋಫ್ಲಾಮಿನ್ ನಂಥಹ ಪೋಷಕಾಂಶ ಗಳಲ್ಲಿ ಸಮೃದ್ದವಾಗಿವೆ.
ಲ್ಯಾಕ್ಟಿಕ್ ಆಸಿಡ್ ನಂಥಹ ಪ್ರೊ ಬಯೋಟಿಕ್ ಗಳನ್ನು ಹೊಂದಿರುವ ಕಾರಣ ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು ಹೊಂದಿರುವುದರಿಂದ ತೂಕ ಇಳಿಕೆಗೆ ಮಜ್ಜಿಗೆ ಸಹಾಯ ಮಾಡುತ್ತದೆ.
ಇದರಲ್ಲಿರುವ ಕ್ಯಾಲ್ಶಿಯಂ ಮೂಳೆಗಳನ್ನು ಆರೋಗ್ಯವಾಗಿಡಲು ಮತ್ತು ಸದೃಢವಾಗಿಡಲು ಸಹಾಯ ಮಾಡುತ್ತದೆ.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ವಿಟಮಿನ್ ನರಗಳ ಕಾರ್ಯ ನಿರ್ವಹಣೆಗೆ ಮತ್ತು ರಕ್ತ ರಚನೆಗೆ ಸಹಾಯ ಮಾಡುತ್ತದೆ.
ಮಜ್ಜಿಗೆ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ವ್ಯಾಯಾಮದ ನಂತರ ಮಜ್ಜಿಗೆ ಸ್ನಾಯುಗಳಿಗೆ ಪ್ರೋಟೀನ್ ರೀತಿ ಕೆಲಸ ಮಾಡುತ್ತದೆ.
ಮಜ್ಜಿಗೆಯಲ್ಲಿರುವ ಕ್ಯಾಲ್ಶಿಯಂ ಹಲ್ಲುಗಳನ್ನು ಬಲವಾಗಿ ಇಡಲು ಸಹಾಯ ಮಾಡುತ್ತದೆ.