ಆರೋಗ್ಯಕ್ಕೆ ಒಳ್ಳೆಯದು

ಪ್ರತಿದಿನ ಬೆಳಗ್ಗೆ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಸಲಹೆ ನೀಡಿದ್ದಾರೆ.

Puttaraj K Alur
Jun 23,2024

ದೇಹಕ್ಕೆ ಪ್ರಯೋಜನ

ರಾತ್ರಿ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

ಉತ್ತಮ ಜೀರ್ಣಕ್ರಿಯೆ

ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಾದಾಮಿ ತುಂಬಾ ಉಪಯುಕ್ತವಾಗಿದೆ.

ಹೃದಯದ ಆರೋಗ್ಯ

ಬಾದಾಮಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಹೃದ್ರೋಗದ ಅಪಾಯ

ಬಾದಾಮಿ ಸೇವನೆಯು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ & ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ

ಬಾದಾಮಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ಚರ್ಮದ ಕಾಂತಿ

ಬಾದಾಮಿಯಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ.

ತೂಕ ನಷ್ಟಕ್ಕೆ ಸಹಕಾರಿ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಪ್ರತಿದಿನವೂ ಬಾದಾಮಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

VIEW ALL

Read Next Story