ಬೆಣ್ಣೆಯಂತೆ ಇರುವ ಬೆಣ್ಣೆ ಹಣ್ಣು ಅಥವಾ ಅವಕಾಡೊ ಹಲವಾರು ಪೋಷಕಾಂಶಗಳು ಹೊಂದಿದೆ.
ಇದು ಪ್ರತಿಯೊಬ್ಬರಿಗೂ ಇಷ್ಟವಾಗುವ ರುಚಿ ಹೊಂದಿದ್ದು, ಇದರಿಂದ ಅನೇಕ ಆರೋಗ್ಯಕರ ಲಾಭಗಳಿವೆ.
ಅವಕಾಡೊದಲ್ಲಿ ಒಳ್ಳೆಯ ಕೊಬ್ಬು, ನಾರಿನಾಂಶ, ವಿಟಮಿನ್, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಮತ್ತು ಫೈಟೊಸ್ಟೆರಾಲ್‌ಗಳಿವೆ.
ತಿನ್ನಲು ರುಚಿಕರವಾಗಿರುವ ಅವಕಾಡೊದಲ್ಲಿ ಏಕಪರ್ಯಾಪ್ತ ತೈಲವಿದ್ದು, ಇದು ಕ್ಯಾಲರಿ ಹೆಚ್ಚು ಮಾಡಲ್ಲ.
ಬೆಣ್ಣೆಹಣ್ಣು ನಿಮ್ಮ ಆರೋಗ್ಯ ವೃದ್ಧಿಸಿ, ಜೀರ್ಣಕ್ರಿಯೆ ಸುಧಾರಿಸುವುದು, ಯಕೃತ್ ನ ಆರೋಗ್ಯ ವೃದ್ಧಿಸುವುದು.
ಇದರಲ್ಲಿರುವ ಏಕಪರ್ಯಾಪ್ತ ಮತ್ತು ಬಹುಪರ್ಯಾಪ್ತ ಕೊಬ್ಬು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅವಕಾಡೊದಲ್ಲಿ ಇರುವಂತಹ ವಿಟಮಿನ್ B5, ವಿಟಮಿನ್ K ಮತ್ತು ವಿಟಮಿನ್ E ಜೀರ್ಣಕ್ರಿಯೆ ಸಮಸ್ಯೆಯನ್ನ ನಿವಾರಿಸುತ್ತದೆ.
ಅವಕಾಡೊದಲ್ಲಿ ಇರುವಂತಹ ನಾರಿನಾಂಶವು ಸುಲಭವಾಗಿ ತೂಕ ಇಳಿಸಲು ನೆರವಾಗುತ್ತದೆ.