ಆರೋಗ್ಯಕ್ಕೆ ಬಹಳ ಒಳ್ಳೆಯದು

ಫಾಕ್ಸ್‌ ನಟ್ಸ್‌, ಲೋಟಸ್‌ ಸೀಡ್ಸ್‌ ಅಥವಾ ತಾವರೆ ಬೀಜ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಮಖಾನವು ಬೆಲೆಯಲ್ಲಿ ದುಬಾರಿಯಾದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು.

Puttaraj K Alur
Feb 23,2025

ಮೆಗ್ನೀಸಿಯಮ್ & ಪೊಟ್ಯಾಸಿಯಮ್

ಮಖಾನಾವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ಸತುವುಗಳಲ್ಲಿ ಸಮೃದ್ಧವಾಗಿದೆ, ಇದು ಹೆಚ್ಚಿನ ಪೌಷ್ಟಿಕಾಂಶದ ಆಹಾರವಾಗಿದೆ.

ಆಕ್ಸಿಡೇಟಿವ್ ಒತ್ತಡ

ಮಖಾನಾವು ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತದೆ.

ತೂಕ ನಷ್ಟಕ್ಕೆ ಸಹಕಾರಿ

ಸೂಪರ್‌ ಫುಡ್‌ ಆಗಿರುವ ಮಖಾನಾವು ಕಡಿಮೆ ಕ್ಯಾಲೋರಿ ಹೊಂದಿದ್ದು ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.

ಪೋಷಕಾಂಶಗಳ ಕೊರತೆ

ಮಖಾನಾ ತಿನ್ನುವುದು ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಸಹಕಾರಿಯಾಗಿದೆ.

ಆರೋಗ್ಯಕರ ಸ್ನಾಕ್ಸ್

ಆರೋಗ್ಯಕರ ಸ್ನಾಕ್ಸ್ ತಿನ್ನಲು ಬಯಕೆ ಉಂಟಾದರೆ ಮಖಾನವನ್ನು ಆಯ್ಕೆ ಮಾಡಬಹುದು, ಇದನ್ನ ಹುರಿದು ತಿಂದರೆ ಬಹಳ ರುಚಿಕರವಾಗಿರುತ್ತದೆ.

ತಿನ್ನಲು ರುಚಿಕರ

ಮಖಾನಾ ತಿನ್ನಲು ಬಹಳ ರುಚಿಕರವಾಗಿದ್ದು, ಮಕ್ಕಳಿಂದ ವಯಸ್ಕರವರೆಗಿನ ಪ್ರತಿಯೊಬ್ಬರೂ ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ.

ಹೃದಯದ ಆರೋಗ್ಯ

ಮಖಾನಾವನ್ನು ಮಧುಮೇಹ ಇರುವವರು ಸಹ ತಿನ್ನಬಹುದು, ಇದರ ಸೇವನೆಯು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.

VIEW ALL

Read Next Story