ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೌತೆಕಾಯಿಯ ರಸವನ್ನು ಚರ್ಮಕ್ಕೆ ಹಚ್ಚುವುದರಿಂದಲೂ ಬಹಳ ಪ್ರಯೋಜನವಾಗುತ್ತದೆ.
ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್, ಫೋಲಿಕ್ ಆಸಿಡ್, ವಿಟಮಿನ್ ಸಿ ಮತ್ತು ಆಂಟಿ ರಿಂಕಲ್ಸ್ ಗುಣ ಅಡಗಿದೆ.
ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ತ್ವಚೆಯನ್ನು ಒಳಗಿನಿಂದ ಶುಚಿಗೊಳಿಸುತ್ತದೆ.
ಸೌತೆಕಾಯಿಯಲ್ಲಿರುವ ಇಫ್ಲಮೇಟರಿ ಗುಣ ತ್ವಚೆಯಲ್ಲಿರುವ ರಾಶಸ್ ಅನ್ನು ಕಡಿಮೆ ಮಾಡುತ್ತದೆ.
ಆಂಟಿ ರಿಂಕಲ್ಸ್ ಗುಣಗಳಿಂದ ಸೌತೆಕಾಯಿ ರಸ ಮುಖ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ತ್ವಚೆಯ ಊತವನ್ನು ಕಡಿಮೆ ಮಾಡಲು ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ಊತ ಕಡಿಮೆಯಾಗುತ್ತದೆ.
ನಿತ್ಯ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಹೈಡ್ರೆಟೆಡ್ ಆಗಿರುತ್ತದೆ. ಮುಖದ ಮೇಲಿರುವ ಕಲೆ ಕೂಡಾ ಇದರಿಂದ ಮಾಯವಾಗುತ್ತದೆ.
ಸೌತೆಕಾಯಿ ರಸವನ್ನು ನಿಯಮಿತವಾಗಿ ಹಚ್ಚುವುದರಿಂದ ಉತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.