ಈ ರೋಗಗಳಿಗೆ ಶಾಶ್ವತ ಪರಿಹಾರ ಪೇರಳೆ ಎಲೆ

Ranjitha R K
Nov 29,2024

ಪೇರಳೆ ಎಲೆ

ಪೇರಳೆಯಂತೆಯೇ ಅದರ ಎಲೆಗಳು ಕೂಡಾ ಆರೋಗ್ಯಕ್ಕೆ ತುಂಬಾ ಆರೋಗ್ಯಕರವಾಗಿದೆ. ಪೇರಳೆ ಎಲೆ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ.

ಪೇರಳೆ ಎಲೆ ಪ್ರಯೋಜನ

ಪೇರಳೆ ಎಲೆಯಂತೆಯೇ ಮುಖ್ಯವಾಗಿ ಇದು ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳಂತಹ ಪೋಷಕಾಂಶಗಳ ಆಗರವಾಗಿದೆ. ಈ ಎಲೆಗಳನ್ನು ನೇರವಾಗಿ ಅಗಿದು ಸೇವಿಸಬಹುದು.ಅಥವಾ ಪೇರಳೆ ಎಲೆಗಳನ್ನು ಬಳಸಿ ತಯಾರಿಸಿದ ಕಷಾಯವನ್ನು ಕೂಡಾ ಸೇವಿಸಬಹುದು.

ಶುಗರ್ ನಿಯಂತ್ರಣ :

ಪೇರಳೆ ಎಲೆಗಳು ಪಾಲಿಫಿನಾಲ್ ಗುಣಲಕ್ಷಣಗಳನ್ನು ಹೊಂದಿದ್ದು, ಆಹಾರದಿಂದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದು ಬ್ಲಡ್ ಶುಗರ್ ಏರುವುದನ್ನು ತಡೆಯುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯ

ಪೇರಳೆ ಎಲೆಗಳಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ತ್ವಚೆ ಮತ್ತು ಕೂದಲಿನ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.

ಹೃದ್ರೋಗವನ್ನು ತಡೆಯುತ್ತದೆ

ಪೇರಳೆ ಎಲೆಗಳ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದರೊಂದಿಗೆ ಹೃದ್ರೋಗವನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ.

ರೋಗನಿರೋಧಕ ಶಕ್ತಿ

ಇದು ಉತ್ತಮ ಪ್ರಮಾಣದ ವಿಟಮಿನ್ ಸಿಯನ್ನು ಹೊಂದಿರುತ್ತದೆ. ಇದು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಜೀರ್ಣಕಾರಿ ಸಮಸ್ಯೆ ನಿವಾರಣೆಗೆ :

ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರೊಂದಿಗೆ, ಮಲಬದ್ಧತೆ, ಅಜೀರ್ಣ, ಅತಿಸಾರ ಮತ್ತು ಊತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಪೇರಳೆ ಎಲೆಗಳ ಕಷಾಯ :

ಪೇರಳೆ ಎಲೆಗಳ ನೀರನ್ನು ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ 1 ಲೋಟ ನೀರು ಮತ್ತು ಕೆಲವು ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರು ಅರ್ಧದಷ್ಟು ಆದ ಮೇಲೆ ಫಿಲ್ಟರ್ ಮಾಡಿ ತಣ್ಣಗಾದ ನಂತರ ಕುಡಿಯಿರಿ.


ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story