ಮಧುಮೇಹದಿಂದ ಕ್ಯಾನ್ಸರ್ ವರೆಗೆ ಮುಕ್ತಿ ನೀಡಬಲ್ಲ ಪರಮೌಷಧ!

Ranjitha R K
Jan 30,2025


ಸಾವಿರಾರು ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕೆಲವು ತರಕಾರಿಗಳು ಕೆಲವೇ ಋತುವಿನಲ್ಲಿ ಮಾತ್ರ ಸಿಗುತ್ತದೆ.


ಕೆಲವು ತರಕಾರಿಗಳು ಚಳಿಗಾಲದಲ್ಲಿ ಮಾತ್ರ ಸಿಗುತ್ತವೆ. ಅಂಥಹ ಒಂದು ತರಕಾರಿ ಚಪ್ಪರದ ಅವರೆಕಾಯಿ.ಈ ಹಸಿರು ತರಕಾರಿ ಪೌಷ್ಟಿಕಾಂಶಗಳ ಆಗರ.


ಚಪ್ಪರದ ಅವರೆಕಾಯಿಯಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಖನಿಜಗಳು ಹೇರಳವಾಗಿ ಇರುತ್ತವೆ. ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕೂಡಾ ಈ ತರಕಾರಿಯಲ್ಲಿ ಅಡಗಿರುತ್ತವೆ.


ಇದರಲ್ಲಿರುವ ಲುಟೀನ್ ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿ. ಮಾತ್ರವಲ್ಲ ಅಧಿಕ ಪ್ರಮಾಣದಲ್ಲಿ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳುವವರಿಗೆ ಇದು ಸಹಾಯ ಮಾಡುತ್ತದೆ.


ಇದು ಅಧಿಕ ಫೈಬರ್ ಹೊಂದಿರುವ ತರಕಾರಿಯಾಗಿದ್ದು ಬ್ಲಡ್ ಶುಗರ್ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ.


ಚಪ್ಪರದ ಅವರೆಕಾಯಿಯಲ್ಲಿ ಮೆಗ್ನಿಶಿಯಂ ಕೂಡಾ ಹೇರಳವಾಗಿ ಕಂಡು ಬರುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.


ಅವರೆ ಕಾಳಿನಲ್ಲಿ ಸತುವಿನ ಅಂಶವು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುತ್ತದೆ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story