ಪೌಷ್ಠಿಕಾಂಶಗಳ ಆಗರವಾಗಿರುವ ಬೆಂಡೆಕಾಯಿ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಬೆಂಡೆಕಾಯಿ ಕಡಿಮೆ ಕ್ಯಾಲರಿ ತರಕಾರಿ ಆಗಿದ್ದು ಇದು ತೂಕ ಇಳಿಕೆಗೆ ಸಹಕಾರಿ ಆಗಲಿದೆ.
ನಿಯಮಿತವಾಗಿ ಬೆಂಡೆಕಾಯಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.
ಬೆಂಡೆಕಾಯಿಯಲ್ಲಿ ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ನಿಯಮಿತವಾಗಿ ಬೆಂಡೆಕಾಯಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬೆಂಡೆಕಾಯಿ ಸೇವನೆಯು ಹೆಂಗಸರಿಗೆ ಭ್ರೂಣ ಬೆಳವಣಿಗೆಯಲ್ಲಿ ಸಹಕಾರಿ ಆಗಿದೆ.
ಬೆಂಡೆಕಾಯಿಯು ಋತುಚಕ್ರದ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಹೆಚ್ಚಿನ ಫೈಬರ್ ಹೊಂದಿರುವ ಬೆಂಡೆಕಾಯಿಯು ಮಧುಮೇಹ ನಿಯಂತ್ರಣಕ್ಕೆ ಪ್ರಯೋಜನಕಾರಿ ಆಗಿದೆ.