ಮೊಳಕೆ ಕಾಳು ತಿಂದರೆ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ

Ranjitha R K
Mar 18,2025


ಹೆಸರು ಕಾಳು ಬಹಳ ಪೌಷ್ಟಿಕ ಮತ್ತು ಆರೋಗ್ಯಕರ. ಇದನ್ನು ಮೊಳಕೆ ಬರಿಸಿ ಸೇವಿಸಿದರೆ ಅಮೃತವಿದ್ದಂತೆ.


ಮೊಳಕೆ ಕಾಳು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹವನ್ನು ರೋಗಗಳಿಂದ ದೂರ ಇಡುತ್ತದೆ.


ಮುಖದ ಮೇಲಿನ ವೃದ್ದಾಪ್ಯದ ಗುರುತನ್ನು ಕಡಿಮೆ ಮಾಡುತ್ತದೆ.


ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.


ಮೊಳಕೆ ಕಾಳು ತಿನ್ನುವುದರಿಂದ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.


ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿದ್ದು ಹಿಮೊಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದರಲ್ಲಿ ವಿಟಮಿನ್ ಎ ಕಂಡು ಬರುತ್ತದೆ. ದೃಷ್ಟಿ ದೋಷವನ್ನು ಸುಧಾರಿಸಲು ಸಹಾಯ ಮಾಡುತ್ತದೆ


ಇದರಲ್ಲಿರುವ ಒಮೆಗಾ ೩ ಕೊಬ್ಬಿನಾಮ್ಲಗಳು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story