ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸುವ ಮೂಲಕ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಬಹುದು.
ಬೆಲ್ಲ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬೆಲ್ಲದ ಕಷಾಯವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಅನುಕೂಲಕರವಾಗಿದೆ.
ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು,ಬೆಲ್ಲದ ಕಷಾಯವನ್ನು ಕುಡಿಯಬಹುದು.ಬೆಲ್ಲವು ಉತ್ತಮ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ.ಇದು ರಕ್ತಹೀನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ದೇಹದ ಶಕ್ತಿಯನ್ನು ಹೆಚ್ಚಿಸಲು ಬೆಲ್ಲದ ಕಷಾಯವನ್ನು ಕುಡಿಯಬಹುದು.ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಬಹುದು.ಇದರಿಂದ ದೇಹದ ಎನರ್ಜಿಯನ್ನು ಹೆಚ್ಚಿಸಬಹುದು.
ಬೆಲ್ಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.
ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ಮೂಳೆಗಳನ್ನು ಸದೃಢಗೊಳಿಸಬಹುದು.ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ಮೂಳೆಗಳ ಬಲವನ್ನು ಸುಧಾರಿಸುತ್ತದೆ.
ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಣೆಗೆ ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು.ಇದು ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
2 ಕಪ್ ನೀರು ಹಾಕಿ 4 ರಿಂದ 5 ತುಳಸಿ ಎಲೆಗಳು, 1 ಇಂಚು ತುಂಡು ಶುಂಠಿ ಮತ್ತು ಕರಿಮೆಣಸು ಹಾಕಿ ಚೆನ್ನಾಗಿ ಕುದಿಸಿ.ನೀರಿನ ಬಣ್ಣ ಬದಲಾಗುತ್ತಿದ್ದ ಹಾಗೆ ಬೆಲ್ಲವನ್ನು ಸೇರಿಸಿ ಕುದಿಸಿ ಫಿಲ್ಟರ್ ಮಾಡಿ ಕುಡಿಯಿರಿ.
ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.