ಈ ಹಣ್ಣುಗಳನ್ನು ಸೇವಿಸಿದರೆ ಯೂರಿಕ್ ಆಸಿಡ್ ನಿಯಂತ್ರಣ ತುಂಬಾ ಸುಲಭ
ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಕೆಲವು ಹಣ್ಣುಗಳು ಸಹಕಾರಿ. ಅವುಗಳೆಂದರೆ...
ಕಿತ್ತಲೆಯಲ್ಲಿ ವಿಟಮಿನ್ ಬಿ12 ಸಮೃದ್ಧವಾಗಿದ್ದು ಇದರ ಸೇವನೆಯಿಂದ ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು.
ನಿಯಮಿತವಾಗಿ ಬಾಳೆಹಣ್ಣನ್ನು ತಿನ್ನುವುದರಿಂದಲೂ ಯೂರಿಕ್ ಆಸಿಡ್ ನಿಯಂತ್ರಣದಲ್ಲಿಡಬಹುದು.
ಸೇಬು ತಿನ್ನುವುದರಿಂದಲೂ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡಬಹುದು.
ಕಿವಿ ಹಣ್ಣಿನ ಸೇವನೆಯು ಯೂರಿಕ್ ಆಮ್ಲ ನಿಯಂತ್ರಣಕ್ಕೆ ದಿವ್ಯೌಷಧವಾಗಿದೆ.
ಅನಾನಸ್ ನಲ್ಲಿರುವ ಬ್ರೋಮೆಲಿನ್ ಎಂಬ ಕಿಣ್ವವು ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.