ಪ್ರಮುಖ ಮಸಾಲೆ ಪದಾರ್ಥವಾಗಿರುವ ದಾಲ್ಚಿನ್ನಿ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ದಾಲ್ಚಿನ್ನಿಯು ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ.
ಉರಿಯೂತದ ಗುಣ ಹೊಂದಿರುವ ದಾಲ್ಚಿನ್ನಿ ದೇಹದ ಉರಿಯೂತ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ದಾಲ್ಚಿನ್ನಿ ನೀರು ಸೇವನೆಯು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಉಬ್ಬುವಿಕೆ ಮತ್ತು ಗ್ಯಾಸ್ ಅನ್ನ ನಿವಾರಿಸುತ್ತದೆ.
ದಾಲ್ಚಿನ್ನಿ ನೀರು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಸುಲಭವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ನಿಯಮಿತವಾಗಿ ದಾಲ್ಚಿನ್ನಿ ನೀರು ಸೇವನೆಯು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದಾಲ್ಚಿನ್ನಿಯನ್ನ ಪುರುಷರ ಲೈಂಗಿಕ ಅಸ್ವಸ್ಥತೆಯಾದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ದಾಲ್ಚಿನ್ನಿ ನೀರು ಸೇವನೆಯು ಮಧುಮೇಹವನ್ನು ನಿರ್ವಹಿಸಲು ಪರಿಣಾಮಕಾರಿ ಪರಿಹಾರವಾಗಿದೆ.