ತಾವರೆ ಬೀಜಗಳನ್ನು ಮಖಾನಾ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ ಪ್ರೊಟೀನ್, ಫೈಬರ್, ವಿಟಮಿನ್ಸ್ ಸಮೃದ್ಧವಾಗಿದ್ದು ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನಿತ್ಯ ಒಂದು ಹಿಡಿ ತಾವರೆ ಬೀಜ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೆಂದರೆ...
ದಿನಕ್ಕೆ ಒಂದು ಹಿಡಿ ತಾವರೆ ಬೀಜಗಳನ್ನು ತಿನ್ನುವುದರಿಂದ ಹಸಿವು ಕಡಿಮೆ ಆಗಿ, ತೂಕ ಇಳಿಕೆಗೆ ಸಹಾಯವಾಗುತ್ತದೆ.
ಮಖಾನಾದಲ್ಲಿ ಆಂಟಿ ಏಜಿಂಗ್ ಗುಣಗಳು ಸಮೃದ್ಧವಾಗಿದ್ದು ಇದು ಸ್ಕಿನ್ ಹೈಡ್ರೇಟ್ ಮಾಡಲು, ಮುಖದ ಸುಕ್ಕುಗಳನ್ನು ಹೋಗಲಾಡಿಸಿ ಕಾಂತಿಯುತ ತ್ವಚೆಯನ್ನು ನೀಡುತ್ತದೆ.
ತಾವರೆ ಬೀಜಗಳಲ್ಲಿ ಫೈಬರ್ ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ ಆಗಿದೆ.
ಮಖಾನಾದಲ್ಲಿ ವಿಟಮಿನ್ ಬಿ1 ಇರುವುದರಿಂದ ಇದನ್ನು ಮಕ್ಕಳಿಗೆ ನಿತ್ಯ ತಿನ್ನಿಸುವುದರಿಂದ ಮೆದುಳು ಚುರುಕಾಗುತ್ತದೆ.
ಮಖಾನಾದಲ್ಲಿ ಕ್ಯಾಲ್ಸಿಯಂ ಕಂಡು ಬರುತ್ತದೆ. ಹಾಗಾಗಿ, ಇದನ್ನು ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.