ಕರಿಬೇವಿನ ಎಲೆಗಳನ್ನು ಹೆಚ್ಚಾಗಿ ಮನೆಗಳಲ್ಲಿ ಒಗ್ಗರಣೆಗೆಂದು ಬಳಸಲಾಗುತ್ತದೆ. ಈ ಎಲೆಗಳು ಆಹಾರವನ್ನು ಪರಿಮಳಯುಕ್ತ ಮತ್ತು ರುಚಿಕರವಾಗಿಸುತ್ತದೆ, ಆದರೆ ನಿಮಗೆ ಗೊತ್ತಾ, ಕರಿಬೇವಿನ ಎಲೆಗಳು ಟೇಸ್ಟಿ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ಇದರಲ್ಲಿ ಕಬ್ಬಿಣ, ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಸಿ ಮುಂತಾದ ಹಲವು ಪೋಷಕಾಂಶಗಳು ಇದ್ದು, ದೇಹಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ.
ಕರಿಬೇವಿನ ಎಲೆಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಇ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
ಕರಿಬೇವಿನ ಎಲೆಗಳು ಮಧುಮೇಹ ರೋಗಿಗಳಿಗೆ ಮನೆಮದ್ದು ಇದ್ದಂತೆ. ಇದನ್ನು ಪ್ರತಿದಿನ ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಬಹುದು.
ಕರಿಬೇವಿನ ಎಲೆಇನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ನಿವಾರಣೆಯಾಗುತ್ತವೆ. ಇದರಲ್ಲಿ ಕಂಡುಬರುವ ಕಿಣ್ವಗಳು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ
ಜೀವಸತ್ವಗಳು, ಕಬ್ಬಿಣ ಮತ್ತು ರಂಜಕದಲ್ಲಿ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.