ಇತ್ತೀಚಿನ ದಿನಗಳಲ್ಲಿ ಜನರು ಫಿಟ್ ಆಗಿರಲು ಅನೇಕ ಆರೋಗ್ಯಕರ ಆಹಾರಗಳನ್ನೇ ಸೇವಿಸುತ್ತಾರೆ. ಇವುಗಳಲ್ಲಿ ಹಣ್ಣು, ಒಣ ಹಣ್ಣು, ಹಸಿರು ತರಕಾರಿ ಮುಖ್ಯವಾದುದು.
ಕೆಲವು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಸಹಕಾರಿಯೋ, ಅವುಗಳ ಸಿಪ್ಪೆ ಕೂಡಾ ಅಷ್ಟೇ ಪ್ರಯೋಜನಕಾರಿಯಾಗಿದೆ.
ದೇಹವನ್ನು ಫಿಟ್ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು.
ಸೀತಾಫಲ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಸಿಗುವ ಹಣ್ಣಾಗಿದೆ. ಇದು ರುಚಿಯ ಜೊತೆ ಜೊತೆಗೆ ಆರೋಗ್ಯವನ್ನು ಕಾಪಾಡಲು ಕೂಡಾ ಸಹಾಯ ಮಾಡುತ್ತದೆ.
ನೀವು ಕೂಡಾ ಈ ಹಣ್ಣನ್ನು ತಿಂದು ಸಿಪ್ಪೆ ಎಸೆಯುತ್ತೀರಾದರೆ ಅದು ನೀವು ಮಾಡುತ್ತಿರುವ ಬಹು ದೊಡ್ಡ ತಪ್ಪು. ಈ ಹಣ್ಣಿನ ತಿರುಲಿನಲ್ಲಿ ಇರುವ ಪೋಷಕ ತತ್ವಕ್ಕಿಂತ ಹೆಚ್ಚು ಇದರ ಸಿಪ್ಪೆಯಲ್ಲಿ ಇರುತ್ತದೆ.
ಈ ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಚಪಾತಿ ಹಿಟ್ಟು ಕಲಸುವಾಗಿ ಬೆರೆಸಿಕೊಳ್ಳಿ.
ಈ ಹಣ್ಣಿನ ಸಿಪ್ಪೆಯನ್ನು ಹಲ್ಲಿನ ಮೇಲೆ ತಿಕ್ಕಿದರೆ ಹಲ್ಲು ಬೆಲ್ಲಗಾಗುವುದರ ಜೊತೆಗೆ ಬಾಯಿಯ ದುರ್ಗಂಧ ಕೂಡಾ ದೂರವಾಗುವುದು.
ಮನೆಯಲ್ಲಿಯೇ ಬಾಡಿ ಮತ್ತು ಫೆಸ್ ಸ್ಕ್ರಬ್ ತಯಾರು ಮಾಡಬೇಕಾದರೆ ಈ ಹಣ್ಣಿನ ಸಿಪ್ಪೆಯ ಪುಡಿಯನ್ನು ಬಳಸಬಹುದು
ಹಣ್ಣಿನ ಸಿಪ್ಪೆಯ ಪುಡಿ, ಅರಶಿನ, ಕಡಲೆ ಹಿಟ್ಟು ಮತ್ತು ಹಾಲನ್ನು ಬಳಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಮುಖದ ಮೇಲೆ ಹಚ್ಚಿ ೨೦ ನಿಮಿಷ ಹಾಗೆಯೇ ಬಿಡಿ. ನಂತರ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.