ತಂಗಳನ್ನದಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?

Published by: Yashaswini V | Dec 14, 2023

ಅನ್ನ

ಶಾಸ್ತ್ರಗಳಲ್ಲಿ ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಬಣ್ಣಿಸಲಾಗುತ್ತದೆ. ಹಾಗಾಗಿಯೇ, ಅನ್ನವನ್ನು ವ್ಯರ್ಥ ಮಾಡಬಾರದು ಎಂದು ದೊಡ್ಡವರು ಹೇಳುವುದನ್ನು ನೀವು ಕೇಳಿರಬಹುದು.

Published by: Yashaswini V | Dec 14, 2023

ತಂಗಳ ಅನ್ನ

ರಾತ್ರಿ ಉಳಿದ ಅನ್ನವನ್ನು ಆಡು ಭಾಷೆಯಲ್ಲಿ ಹೆಚ್ಚಿನವಲ್ಲಿ ತಂಗಳನ್ನ ಎಂತಲೇ ಕರೆಯುತ್ತಾರೆ.

Published by: Yashaswini V | Dec 14, 2023

ತಂಗಳನ್ನ

ನಮ್ಮಲ್ಲಿ ಹೆಚ್ಚಿನವರು ಈ ತಂಗಳನ್ನವನ್ನು ತಿನ್ನುವುದಿಲ್ಲ. ಆದರೆ, ಇದರ ಬಳಕೆಯಿಂದ ಆರೋಗ್ಯಕ್ಕಿರುವ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ತಂಗಳನ್ನವನ್ನು ಎಸೆಯುವುದಿಲ್ಲ.

Published by: Yashaswini V | Dec 14, 2023

ತಂಗಳನ್ನ ಬಳಕೆ

ರಾತ್ರಿ ವೇಳೆ ಅನ್ನ ಉಳಿದರೆ ಅದನ್ನು ಎಸೆಯುವ ಬದಲಿಗೆ ಮಣ್ಣಿನ ಪಾತ್ರೆಯಲ್ಲಿ ಆ ಅನ್ನವನ್ನು ನೆನೆಸಿಟ್ಟು, ಬೆಳಿಗ್ಗೆ ರುಬ್ಬಿ ದೋಸೆ ಮಾಡಬಹುದು. ಇಲ್ಲವೇ ಇದಕ್ಕೆ ಮಜ್ಜಿಗೆ ಈರುಳ್ಳಿ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಲ್ಲದಿದ್ದರೂ ಇದರ ಬಳಕೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳೆಂದರೆ...

Published by: Yashaswini V | Dec 14, 2023

ಉಷ್ಣತೆ ನಿಯಂತ್ರಣ

ತಂಗಳನ್ನ ತಿನ್ನುವುದರಿಂದ ದೇಹದ ಅತಿಯಾದ ಉಷ್ಣತೆಯನ್ನು ನಿಯಂತ್ರಿಸಬಹುದು.

Published by: Yashaswini V | Dec 14, 2023

ಮಲಬದ್ಧತೆ

ತಂಗಳನ್ನದಲ್ಲಿ ನಾರಿಣಾಂಶ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ.

Published by: Yashaswini V | Dec 14, 2023

ತಾಜಾತನ

ಸಾಮಾನ್ಯವಾಗಿ ತಂಗಳನ್ನ ತಿಂದರೆ ನಿದ್ದೆ ಬರುತ್ತದೆ ಎನ್ನುತ್ತಾರೆ. ಆದರೆ, ಇದು ಕೇವಲ ನಿಮ್ಮ ಮನಃಸ್ಥಿತಿಯಷ್ಟೆ. ವಾಸ್ತವವಾಗಿ, ತಂಗಳನ್ನ ತಿನ್ನುವುದರಿಂದ ಇಡೀ ದಿನ ತಾಜಾತನ ಇರಲಿದೆ.

Published by: Yashaswini V | Dec 14, 2023

ಟೀ, ಕಾಫಿ ಚಟ

ನೀವು ಅತಿಯಾಗಿ ಟೀ, ಕಾಫಿ ಸವಿಯುವುದನ್ನು ಬಿಡಲು ಇಚ್ಛಿಸಿದರೆ ದಿನ ಬೆಳಿಗ್ಗೆ ಹೊತ್ತು ತಂಗಳನ್ನ ಸೇವಿಸಿ.

Published by: Yashaswini V | Dec 14, 2023

ಅಲ್ಸರ್

ವಾರಕ್ಕೆರಡು ಬಾರಿ ತಂಗಳನ್ನ ತಿನ್ನುವುದರಿಂದ ಅಲ್ಸರ್ ಸಮಸ್ಯೆಗೆ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 14, 2023

VIEW ALL

Read Next Story