ಸಾಸಿವೆಯಲ್ಲಿದೆ ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ನೀಡುವ ಗುಣ

Bhavishya Shetty
Oct 17,2023

ಆರೋಗ್ಯ ಪ್ರಯೋಜನ

ಸಾಸಿವೆ ಕಾಳುಗಳನ್ನು ಭಾರತೀಯ ಅಡುಗೆಮನೆಯಲ್ಲಿ ಮಸಾಲೆಗಾಗಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ನಾವಿಂದು ಈ ವರದಿಯಲ್ಲಿ ಸಾಸಿವೆಯ ಆರೋಗ್ಯದ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ.

ಸಂಶೋಧನೆಯ ವರದಿ

NCBI ವೆಬ್ಸೈಟ್’ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ ಸಾಸಿವೆ ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಈ ಗುಣವು ದೇಹದಲ್ಲಿ ಕ್ಯಾನ್ಸರ್ ಬೆಳೆಯುವುದನ್ನು ತಡೆಯುತ್ತದೆ

ಕ್ಯಾನ್ಸರ್ ಅಪಾಯ

ಸಾಸಿವೆ ಎಣ್ಣೆಯಲ್ಲಿರುವ ಒಮೆಗಾ -3 ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಕೆಲಸ ಮಾಡುತ್ತದೆ ಎಂದು ಮತ್ತೊಂದು ಸಂಶೋಧನೆಯು ಕಂಡುಹಿಡಿದಿದೆ.

ಕ್ಯಾನ್ಸರ್ ವಿರೋಧಿ ಗುಣ

ಸಾಸಿವೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸುತ್ತವೆ. ಆದರೆ ಇದು ಕ್ಯಾನ್ಸರ್’ಗೆ ಚಿಕಿತ್ಸೆಯಾಗುವುದಿಲ್ಲ. ಆದ್ದರಿಂದ ಯಾರಾದರೂ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.

ಆಸ್ತಮಾ

ವೈಜ್ಞಾನಿಕ ಅಧ್ಯಯನದ ಪ್ರಕಾರ, ಸಿನಾಪೈನ್ ಎಂಬ ಸಾವಯವ ಸಂಯುಕ್ತವು ಸಾಸಿವೆ ಬೀಜಗಳಲ್ಲಿ ಕಂಡುಬರುತ್ತದೆ. ಇದು ಸ್ನಾಯು ಚಟುವಟಿಕೆ ಮತ್ತು ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುವ ಮೂಲಕ ಆಸ್ತಮಾವನ್ನು ತಡೆಯಲು ಸಹಾಯ ಮಾಡುತ್ತದೆ

ಮೈಗ್ರೇನ್

ಸಾಸಿವೆ ಕಾಳುಗಳಲ್ಲಿ ರೈಬೋಫ್ಲಾವಿನ್ ಎಂಬ ವಿಟಮಿನ್ ಇದೆ. ಇದು ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡ

ಮೆಥನಾಲ್ ಸಾರವು ಸಾಸಿವೆ ಬೀಜಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇದು ಅಧಿಕ ರಕ್ತದೊತ್ತಡದ ನಿಯಂತ್ರಿಸುತ್ತದೆ.

ತೂಕ ನಷ್ಟಕ್ಕೆ ಸಹಾಯಕ

ಸಂಶೋಧನೆಯ ಪ್ರಕಾರ, ಸಾಸಿವೆ ಕಾಳುಗಳಿಂದ ತೆಗೆದ ಎಣ್ಣೆಯು ತೂಕ ನಷ್ಟಕ್ಕೆ ಸಹಾಯಕವಾಗಿದೆ. ಸಾಸಿವೆ ಎಣ್ಣೆಯಲ್ಲಿ ಹೇರಳವಾದ ಡಯಾಸಿಲ್ಗ್ಲಿಸೆರಾಲ್ ಕಂಡುಬರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ

ಸೂಚನೆ

- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ

VIEW ALL

Read Next Story