ದಾಳಿಂಬೆ ಎಲೆಯಲ್ಲಿ ಎಷ್ಟೊಂದು ಆರೋಗ್ಯ ಲಾಭಗಳಿವೆ ಗೊತ್ತಾ?

Bhavishya Shetty
Mar 05,2024

ಪ್ರಯೋಜನ

ದಾಳಿಂಬೆ ಆರೋಗ್ಯಕ್ಕೆ ತುಂಬಾ ಉಪಯುಕ್ತ. ರಕ್ತದ ಕೊರತೆಯಿಂದ ಹಿಡಿದು ಆರೋಗ್ಯದ ಅನೇಕ ವಿಷಯಗಳಲ್ಲಿ ಇದು ಸಹಾಯಕವಾಗಿದೆ. ಆದರೆ ಹಣ್ಣಿಗಿಂತ ದಾಳಿಂಬೆ ಎಲೆಯು ಹೆಚ್ಚು ಶಕ್ತಿಶಾಲಿ. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಶೀತ ಮತ್ತು ಜ್ವರ

ಕೆಮ್ಮು, ಶೀತ ಮತ್ತು ಜ್ವರದ ಚಿಕಿತ್ಸೆಯಲ್ಲಿ ದಾಳಿಂಬೆ ಎಲೆಗಳನ್ನು ಬಳಕೆ ಮಾಡಲಾಗುತ್ತದೆ. ಈ ಎಲೆಗಳನ್ನು ಶುದ್ಧ ನೀರಿನಲ್ಲಿ ಕುದಿಸಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ತ್ವಚೆ

ದಾಳಿಂಬೆ ಎಲೆಗಳು ಚರ್ಮಕ್ಕೆ ಕೂಡ ಪ್ರಯೋಜನಕಾರಿ. ಇದು ಚರ್ಮವನ್ನು ದದ್ದುಗಳಿಂದ ರಕ್ಷಿಸುವುದಲ್ಲದೆ, ನಿಮ್ಮ ತ್ವಚೆಗೆ ಯಾವುದೇ ಸಮಸ್ಯೆ ಇದ್ದರೂ ಸಹ ಅವುಗಳನ್ನು ದೂರ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆ

ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ದಾಳಿಂಬೆ ಎಲೆಯು ಸಹಾಯಕವಾಗುತ್ತದೆ. ಹೊಟ್ಟೆನೋವಿಗೂ ಸಹ ಇದು ಪ್ರಯೋಜನಕಾರಿ.

ಅಜೀರ್ಣ

ದಾಳಿಂಬೆ ಎಲೆಗಳಲ್ಲಿ ಪೋಷಕಾಂಶಗಳಿದ್ದು, ಅಜೀರ್ಣ ಮತ್ತು ಭೇದಿ ಸಮಸ್ಯೆಗಳ ನಿವಾರಣೆಗೆ ಸಹಕಾರಿ.

ಮೊಡವೆ

ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಹಚ್ಚುವುದರಿಂದ ಹುಣ್ಣುಗಳು, ಮೊಡವೆಗಳನ್ನು ಸಹ ಹೋಗಲಾಡಿಸಬಹುದು.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story