ಮೂಲಂಗಿಯನ್ನು ಪಲ್ಯ, ಸಾಂಬಾರ್ ರೂಪದಲ್ಲಿ ಸೇವಿಸಲಾಗುತ್ತದೆ. ರುಚಿಯ ಹೊರತಾಗಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಜೀರ್ಣಕಾರಿ ಸಮಸ್ಯೆಯನ್ನು ಸುಧಾರಿಸಲು ಮೂಲಂಗಿ ಸಹಾಯ ಮಾಡುತ್ತದೆ.
ಮೂಲಂಗಿಯಲ್ಲಿರುವ ನಾರಿನಂಶ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಮಲಬದ್ದತೆ ಸಮಸ್ಯೆ ನಿವಾರಿಸಲು ಮೂಲಂಗಿಯನ್ನು ಸೇವಿಸಬೇಕು.
ಮೂಲಂಗಿ ಜ್ಯೂಸ್ ಸೇವಿಸುವ ಮೂಲಕ ದೇಹವನ್ನು ಸುಲಭವಾಗಿ ಡಿಟಾಕ್ಸ್ ಮಾಡಬಹುದು.
ಮೂಲಂಗಿಯಲ್ಲಿರುವ ಅಂಶಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೊಟ್ಟೆಯ ಸಮಸ್ಯೆ ನಿವಾರಿಸುವ ಜೊತೆಗೆ ರಕ್ತದೊತ್ತಡ ನಿವಾರಣೆಗೂ ಇದು ಸಹಾಯ ಮಾಡುತ್ತದೆ.
ಮೂಲಂಗಿಯಲ್ಲಿ ಕಂಡು ಬರುವ ಆಂಟಿ ಡಯಾಬಿಟಿಕ್ ಅಂಶಗಳು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.