ಬಹುತೇಕರು ಮೂಲಂಗಿ ಗೆಡ್ಡೆ ಸೇವಿಸುತ್ತಾರೆ. ಆದರೆ ಅದರ ಸೊಪ್ಪನ್ನು ಎಸೆಯುತ್ತಾರೆ. ಮೂಲಂಗಿ ಸೊಪ್ಪು ಪೋಷಕಾಂಶಗಳಲ್ಲಿ ಸಮೃದ್ದವಾಗಿದೆ.
ಇದರಲ್ಲಿ ವಿಟಮಿನ್ ಎ, ಬಿ೧, ಬಿ೬, ಪೋಲಿಕ್ ಆಸಿಡ್, ಕ್ಯಾಲ್ಷಿಯಂ, ರಂಜಕ, ಮೆಗ್ನಿಶಿಯಂ, ಪೊಟ್ಯಾಷಿಯಂ, ಐರನ್ ಕಂಡುಬರುತ್ತದೆ.
ವಿಟಮಿನ್ ಸಿ ಸಮೃದ್ದವಾಗಿರುವ ಮೂಲಂಗಿ ಸೊಪ್ಪನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮೂಲಂಗಿ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವಿರುತ್ತದೆ. ಇದು ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಮೂಲಂಗಿ ಸೊಪ್ಪು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಇದರ ಸೇವನೆ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.
ನಾರಿನಂಶ ಹೆಚ್ಚಾಗಿರುವ ಮೂಲಂಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ವಿಟಮಿನ್ ಎ, ಬಿ೧, ಬಿ೬, ಇತ್ಯಾದಿಗಳಿಂದ ಸಮೃದ್ದವಾಗಿರುವ ಮೂಲಂಗಿ ಸೊಪ್ಪು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಎ, ಬಿ೧, ಬಿ೬, ಇತ್ಯಾದಿಗಳಿಂದ ಸಮೃದ್ದವಾಗಿರುವ ಮೂಲಂಗಿ ಸೊಪ್ಪು ಕಣ್ಣಿನ ಆರೋಗ್ಯಕ್ಕೂ ಸಹಕಾರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.