ಪ್ರತಿದಿನ ಅಡುಗೆಯಲ್ಲಿ ಹುಣಸೆಹಣ್ಣಿನ ಬಳಕೆಯಿಂದ ನಮಗೆ ಗೊತ್ತಿಲ್ಲದಂತೆ ನಾವು ಅನೇಕ ಆರೋಗ್ಯ ಪ್ರಯೋಜನ ಪಡೆಯುತ್ತಿರುತ್ತೇವೆ.
ಚಳಿಗಾಲದಲ್ಲಿ ಹುಣಸೆ ಹಣ್ಣು ಸೇವನೆಯಿಂದ ನಮಗೆ ಹಲವಾರು ಉಪಯೋಗಗಳಿವೆ.
ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಸೇರಿದಂತೆ ವಿಟಮಿನ್ ಬಿ, ಪೊಟಾಸಿಯಂ, ಮೆಗ್ನೀಷಿಯಂ ಕಬ್ಬಿಣ, ಖನಿಜಾಂಶಗಳು ಮತ್ತು ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿವೆ.
ನಾರಿನ ಅಂಶ ಹೆಚ್ಚಾಗಿರುವ ಹುಣಸೆಹಣ್ಣಿನ ಸೇವನೆಯಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
ಹುಣಸೆಹಣ್ಣು ನಮ್ಮ ಕರುಳಿನ ಭಾಗದಲ್ಲಿ ಉತ್ತಮ ಚಲನೆಯನ್ನು ಉಂಟು ಮಾಡುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಹುಣಸೆ ಹಣ್ಣಿನಲ್ಲಿರುವ ಆಂಟಿ-ಆಕ್ಸಿಡೆಂಟ್ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ ಮತ್ತು ಹೃದಯದ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ.
ದೇಹದ ಗ್ಲುಕೋಸ್ ಬಳಕೆಯನ್ನು ಹೆಚ್ಚು ಮಾಡುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್‌ಅನ್ನು ಹುಣಸೆಹಣ್ಣು ಕಂಟ್ರೋಲ್ ಮಾಡುತ್ತದೆ.