ವಾಲ್ನಟ್ಸ್ ತಿನ್ನುವುದು ನಿಮ್ಮ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು LDL "ಕೆಟ್ಟ" ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ವಾಲ್ನಟ್ಸ್ ಸೇವನೆಯು ಹೃದಯ ಕಾಯಿಲೆಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡಲು ವಾಲ್ನಟ್ಸ್ ಸಹಾಯ ಮಾಡುತ್ತದೆ.
ಹೃದಯಾಘಾತಕ್ಕೆ ಕಾರಣವಾಗುವ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಲು ನೀವು ಪ್ರತಿದಿನವೂ ವಾಲ್‌ನಟ್ಸ್ ಸೇವಿಸಬೇಕು.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀವು ನಿಯಮಿತವಾಗಿ ವಾಲ್‌ನಟ್ಸ್ ಸೇವನೆ ಮಾಡುವುದು ಉತ್ತಮ.
ವಾಲ್ನಟ್ಸ್ ತಿನ್ನುವುದರಿಂದ ಟ್ರೈಗ್ಲಿಸರೈಡ್‌ಗಳ ಮಟ್ಟ ಕಡಿಮೆಯಾಗುತ್ತದೆ. ಇದು ಹೃದಯ ಕಾಯಿಲೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಬರಂದತೆ ನೋಡಿಕೊಳ್ಳುತ್ತದೆ.
ವಾಲ್ನಟ್ಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಇದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ನಿಯಮಿತವಾಗಿ ವಾಲ್ನಟ್ಸ್ ಸೇವನೆಯಿಂದ ನಿಮ್ಮ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ವಾಲ್ನಟ್ಸ್‌ನಲ್ಲಿರುವ ಸಸ್ಯ ಸಂಯುಕ್ತಗಳು ಮೆದುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಆಲೋಚನೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ