ದೇಹವನ್ನು ರೋಗಗಳಿಂದ ರಕ್ಷಿಸಲು ಪೌಷ್ಟಿಕಾಂಶದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅವಶ್ಯಕ. ಸೇಬು, ಬಾಳೆಹಣ್ಣು, ಪೇರಲ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಎಲ್ಲರೂ ತಿನ್ನುತ್ತಾರೆ. ಆದರೆ ನೀವು ಎಂದಾದರೂ ಜಂಬು ನೇರಳೆ ಹಣ್ಣು ತಿಂದಿದ್ದೀರಾ?
ಜಂಬು ನೇರಳೆ ಹಣ್ಣು ಉಷ್ಣವಲಯದಲ್ಲಿ ಬೆಳೆಯುವ ಸ್ವಾದಿಷ್ಟವಾದ ಹಣ್ಣಾಗಿದೆ. ಇದು ಹೆಚ್ಚಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಈ ಹಣ್ಣು ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ, ಭಾರತದ ಕೆಲವು ರಾಜ್ಯಗಳಲ್ಲಿಯೂ ಕಂಡುಬರುತ್ತದೆ.
ಬೇಸಿಗೆ ಋತುವಿನಲ್ಲಿ, ದೇಹದಲ್ಲಿ ನೀರಿನ ಕೊರತೆಯು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ತಡೆಯಲು ಜಂಬು ನೇರಳೆಯನ್ನು ತಿನ್ನಬಹುದು. ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.
ಜಂಬು ನೇರಳೆ ಗ್ಯಾಲಿಕ್ ಆಮ್ಲ, ಟ್ಯಾನಿನ್ ಕ್ವೆರ್ಸೆಟಿನ್’ನಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. ಜೊತೆಗೆ ಆಕ್ಸಿಡೇಟಿವ್ ಒತ್ತಡದ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.
ಜಂಬು ನೇರಳೆ ಸೇವನೆಯು ಅಧಿಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆಯು ಹೆಚ್ಚು ಕಾಲ ತುಂಬಿರುತ್ತದೆ.
ಜಂಬು ನೇರಳೆಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಕಾರಣಕ್ಕಾಗಿ ಜಂಬು ನೇರಳೆ ಸೇವಿಸಿದರೆ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ದೂರವಿರಿಸುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ