ಸಾಮಾನ್ಯವಾಗಿ ನೇರಳೆ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯಲಾಗುತ್ತದೆ. ಆದರೆ ಈ ಹಣ್ಣಿನ ಬೀಜ ಕೂಡಾ ಬಹಳ ಅದ್ಭುತ ಪ್ರಯೋಜನಗಳನ್ನು ಹೊಂದಿದೆ.

Ranjitha R K
Jun 08,2023


ನೇರಳೆ ಹಣ್ಣಿನ ಬೀಜ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಟೈಪ್ 2 ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.


ಎಲಾಜಿಕ್ ಆಮ್ಲದ ಪ್ರಮಾಣ ಇದರಲ್ಲಿ ಕಂಡು ಬರುತ್ತದೆ. ಬಿಪಿಯನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.


ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಬೇಕು, ಈ ಪುಡಿಯನ್ನು ಹಾಲಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ಮೊಡವೆ ಮೂಡುವುದಿಲ್ಲ.


ನೇರಳೆ ಹಣ್ಣಿನ ಬೀಜದ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ತಿಂದರೆ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.


ನೇರಳೆ ಹಣ್ಣಿನ ಬೀಜ ಹಲ್ಲು ಮತ್ತು ಒಸಡಿನ ಆರೋಗ್ಯಕ್ಕೆ ಸಹಕಾರಿ.


ಗಂಟಲಿನಲ್ಲಿ ಕಿರಿ ಕಿರಿ ಉಂಟಾಗಿ ದ್ವನಿ ಸಮಸ್ಯೆ ಉಂಟಾಗಿದ್ದರೆ ನೇರಳೆ ಹಣ್ಣಿನ ಬೀಜಗಳ ಪುಡಿಯನ್ನು ನೀರಿನಲ್ಲಿ ಹಾಕಿ ಗಾರ್ಗಲ್ ಮಾಡಿದರೆ ಧ್ವನಿ ಸರಿಯಾಗುತ್ತದೆ.


ಜೀರ್ಣಾಂಗ ವ್ಯವಸ್ಥೆಯನ್ನು ಇದು ಸರಿ ಮಾಡುತ್ತದೆ.

VIEW ALL

Read Next Story