ಡೊಳ್ಳು ಹೊಟ್ಟೆಯನ್ನು ಬೆಣ್ಣೆಯಂತೆ ಕರಗಿಸಲು ಸುಲಭ ಪರಿಹಾರ, ಒಮ್ಮೆ ಟ್ರೈ ಮಾಡಿ

Yashaswini V
Jun 09,2025

ಡೊಳ್ಳು ಹೊಟ್ಟೆ

ಇತ್ತೀಚಿನ ದಿನಗಳಲ್ಲಿ ಡೊಳ್ಳು ಹೊಟ್ಟೆ ಕರಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ, ನಿಮ್ಮ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳಿಂದ ಬಲೂನ್ ರೀತಿಯ ಹೊಟ್ಟೆಯನ್ನು ಸುಲಭವಾಗಿ ಕರಗಿಸಬಹುದು.

ತೂಕ ಇಳಿಕೆ

ತೂಕ ಇಳಿಕೆ ಮತ್ತು ಡೊಳ್ಳು ಹೊಟ್ಟೆ ಕರಗಿಸಲು ಹೆಚ್ಚು ಶ್ರಮವಹಿಸಬೇಕಿಲ್ಲ ಅಥವಾ ಇದಕ್ಕಾಗೆ ಹೆಚ್ಚು ಹಣ ಖರ್ಚು ಮಾಡುವ ಪ್ರಮೇಯವೂ ಇಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ತೂಕ ಇಳಿಕೆ ತುಂಬಾ ಸುಲಭವಾಗಿದೆ.

ನಿಂಬೆ ನೀರು

ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಓಳು ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಇದು ದೇಹಕ್ಕೆ ಉತ್ತಮ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ.

ಜೀರಿಗೆ ನೀರು

ರಾತ್ರಿ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಜೀರಿಗೆ ನೆನೆಸಿಟ್ಟು ಮುಂಜಾನೆ ಆ ನೀರನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಿ, ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತದೆ.

ಗ್ರೀನ್ ಟೀ

ಕಾಫಿ-ಟೀ ಬದಲಿಗೆ ದಿನಕ್ಕೆ ಒಂದೆರಡು ಬಾರಿ ಗ್ರೀನ್ ಟೀ ಸೇವಿಸುವುದರಿಂದ ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗಳು ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ಆಗಿವೆ.

ಶುಂಠಿ ಟೀ

ಹಾಲು ಹಾಕದೇ ನಿತ್ಯ ಒಂದು ಗ್ಲಾಸ್ ಶುಂಠಿ ಟೀ ತಯಾರಿಸಿ ಕುಡಿಯುವುದರಿಂದ ಇದು ದೇಹದಲ್ಲಿ ಹೆಚ್ಚುವರಿಯಾಗಿರುವ ಕೊಬ್ಬನ್ನು ಕರಗಿಸುವಲ್ಲಿ ಪರಿಣಾಮಕಾರಿ ಆಗಿದೆ.

ಸಕ್ಕರೆ ಬದಲಿಗೆ ಬೆಲ್ಲ

ಸಕ್ಕರೆ ಸೇರಿದಂತೆ ಪೇಸ್ಟ್ರಿ, ಐಸ್ ಕ್ರೀಂ, ಸಿಹಿಕಾರಕಗಳಿಂದಾಗಿ ಹೊಟ್ಟೆಯ ಕೊಬ್ಬು ಜಾಸ್ತಿಯಾಗುತ್ತದೆ. ಇವುಗಳ ಬದಲಿಗೆ ಸಕ್ಕರೆ ಬಿಟ್ಟು ಬೆಲ್ಲದ ಸಿಹಿ ತಿನಿಸುಗಳ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಪ್ಪಿಸಬಹುದು.

ವಾಕ್, ವ್ಯಾಯಾಮ

ನಿತ್ಯ ಕನಿಷ್ಠ ಅರ್ಧಗಂಟೆಯಾದರೂ ವಾಕ್, ವ್ಯಾಯಾಮಗಳನ್ನು ರೂಢಿಸಿಕೊಳ್ಳಿ.

ನಿದ್ರೆ

ತೂಕ ಇಳಿಕೆ ದೈನಂದಿನ ಚಟುವಟಿಕೆಗಳ ಜೊತೆಗೆ ಉತ್ತಮ ನಿದ್ರೆಯೂ ಅಗತ್ಯ. ಪ್ರತಿ ದಿನ ಕನಿಷ್ಠ 8ಗಂಟೆಗಳ ನಿದ್ರೆಯನ್ನು ಖಚಿತಪಡಿಸಿಕೊಳ್ಳಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story