ಸಾಸಿವೆ ಎಣ್ಣೆಯಲ್ಲಿ ಈ ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಬೇಕು. ಕೆಲವೇ ದಿನಗಳಲ್ಲಿ ನಿಮ್ಮ ಕೂದಲಿನ ಬೆಳವಣಿಗೆ ನಿಮ್ಮ ಗಮನಕ್ಕೆ ಬರುತ್ತದೆ.
ಬೆಳ್ಳುಳ್ಳಿಯಲ್ಲಿ ಸಲ್ಫರ್ ಮತ್ತು ಸೆಲೆನಿಯಂ ಇರುತ್ತದೆ. ಇದು ಕೂದಲು ಸದೃಢವಾಗಿ ಇರುವಂತೆ ಮಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಬೆಳ್ಳುಳ್ಳಿ ಜಜ್ಜಿ ಹಾಕಿ ಕೂದಲಿಗೆ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ.
ಮೆಂತ್ಯೆ ಕಾಳಿನಲ್ಲಿಯೂ ಪ್ರೋಟೀನ್ ಮತ್ತು ವಿಟಮಿನ್ ಕಂಡುಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಮೆಂತ್ಯೆ ಕಾಳುಗಳನ್ನು ಹಾಕಿ ಪೇಸ್ಟ್ ಮಾಡಿ ಹಚ್ಚಿದರೆ ಕೂದಲು ಉದ್ದನೆ ಬೆಳೆಯುತ್ತದೆ.
ಕೂದಲ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಈರುಳ್ಳಿಯಲ್ಲಿ ಕಂಡು ಬರುತ್ತದೆ. ರುರುಳ್ಳಿ ರಸವನ್ನು ಸಾಸಿವೆ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಕೂದಲು ಉದುರುವುದಿಲ್ಲ.
ಆಲೋವಿರಾ ಜೆಲ್ ಅನ್ನು ಸಾಸಿವೆ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂಡಾ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದು.
ಸಾಸಿವೆ ಎಣ್ಣೆಯಲ್ಲಿ ಎರಡು ಚಮಚ ಮೆಹೆಂದಿ ಹಾಕಿ ಕಪ್ಪಾಗುವವರೆಗೆ ಕುದಿಸಿ. ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಇದು ಬಿಳಿ ಕೂದಲು ಕಪ್ಪಾಗುವಂತೆ ಮಾಡುವುದಲ್ಲದೆ, ಕೂದಲು ಉದುರುವುದನ್ನು ತಡೆಯುತ್ತದೆ.
ಮೊಟ್ಟೆಯ ಬಿಳಿ ಭಾಗವನ್ನು ಸಾಸಿವೆ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲ ಬೆಳವಣಿಗೆ ಚೆನ್ನಾಗಿರುತ್ತದೆ.
ಸಾಸಿವೆ ಎಣ್ಣೆಯಲ್ಲಿ ಬೇವಿನ ಎಲೆಯ ರಸ ತೆಗೆದು ಬೆರೆಸಿ ಕೂದಲು ಉದುರುವುದು ನಿಲ್ಲುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಇದನ್ನೂ ಅಳವಡಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. zee kannada news ಇದನ್ನು ಅನುಮೋದಿಸುವುದಿಲ್ಲ