ಬೀಟ್ರೂಟ್

ಬೀಟ್ರೂಟ್ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಇವೆದರ ಮಧ್ಯೆ ಇದರ ಪುಡಿಯಿಂದ ಹೇರ್ ಕಲರ್ ಮಾಡಿಸಿಕೊಂಡರೆ ಸಖತ್ ಶೈನ್ ಆಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Bhavishya Shetty
Apr 14,2023

ಬೀಟ್ರೂಟ್

ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬೀಟ್ರೂಟ್ ಹೇರ್ ಪ್ಯಾಕ್ ಕಡಿಮೆಗೊಳಿಸುತ್ತದೆ. ಉತ್ತಮ ಬಣ್ಣ ನೀಡುವ ಜೊತೆಗೆ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.

ಬೀಟ್ರೂಟ್

ಬೀಟ್ರೂಟ್ ತರಕಾರಿಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.

ಬೀಟ್ರೂಟ್

ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ವಿಕೋಟಿನಿಕ್ ಆಮ್ಲವನ್ನು ಹೊಂದಿರುವ ಬೀಟ್ರೂಟ್, ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಒಣ ಕೂದಲಿನ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತದೆ.

ಬೀಟ್ರೂಟ್

ಬೀಟ್ರೂಟ್ ಎಲೆಗಳು ಮತ್ತು ಬೀಟ್ರೂಟ್ ಅನ್ನು ಕತ್ತರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಅದಕ್ಕೆ ಒಂದು ಚಮಚ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಬಳಿಕ ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಇರಿಸಿ

ಬೀಟ್ರೂಟ್

ನಂತರ ಶಾಂಪೂ ಸಹಾಯದಿಂದ ತಣ್ಣೀರಿನಲ್ಲಿ ಸ್ನಾನ ಮಾಡಿ. ಹೀಗೆ ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.

ಸೂಚನೆ

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story