ಆರೋಗ್ಯಕ್ಕೆ ಅಮೃತವಿದ್ದಂತೆ ಅವರೆಕಾಳು...!
ತರಕಾರಿಗಳಲ್ಲಿ ಹೆಚ್ಚು ಬಳಸಲ್ಪಡುವ ತರಕಾರಿ ಎಂದರೆ ಬೀನ್ಸ್. ಬೀನ್ಸ್ ನಲ್ಲಿ ಹಲವಾರು ವಿಧಗಳಿವೆ.. ಅದರಲ್ಲಿ ಅವರೆ ಕಾಳು ಕೂಡ ಒಂದು..
ಈ ಅವರೆಕಾಳಿನ ತವರೂರು ದಕ್ಷಿಣ ಅಮೆರಿಕಾ... ಆದರೆ ಇದನ್ನು ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿದೆ.
ಈ ಅವರೆಕಾಳಿನಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶಗಳು ಇವೆ.. ಹಾಗಾಗಿಯೇ ಇದನ್ನು ಆರೋಗ್ಯದ ಗಣಿ ಎಂದು ಬಣ್ಣಿಸಲಾಗುತ್ತದೆ.
ಅವರೆಕಾಳಿನಲ್ಲಿ ಮೆದುಳಿನ ಆರೋಗ್ಯ ವೃದ್ಧಿಗೆ ಅವಶ್ಯವಾಗಿರುವ ಹಲವು ಪೋಷಕಾಂಶಗಳು ಕಂಡು ಬರುತ್ತವೆ.
ಅವರೆಕಾಳಿನ ನಿಯಮಿತ ಸೇವನೆಯು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
ಅವರೆ ಕಾಳಿನಲ್ಲಿ ರಕ್ತದೊತ್ತಡ ತಗ್ಗಿಸುವಂತಹ ಮೂಲಭೂತ ಅಂಶಗಳು ಕಂಡು ಬರುತ್ತವೆ. ಹಾಗಾಗಿ, ಬಿಪಿ ಸಮಸ್ಯೆ ಇರುವವರಿಗೆ ಇದೊಂದು ಅತ್ಯುತ್ತಮ ಆಹಾರವಾಗಿದೆ.
ಅವರೆಕಾಳಿನಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಅವರೆ ಕಾಳು ಮಹಾಮಾರಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.