ಅವರೆಕಾಳಿನಲ್ಲಿದೆ ಈ ರೋಗ ಗುಣಪಡಿಸುವ ಶಕ್ತಿ!
ಅವರೆಕಾಳು ಚಳಿಗಾಲದಲ್ಲಿ ಅತಿ ಹೆಚ್ಚಾಗಿ ಸಿಗುತ್ತದೆ. ಇದನ್ನು ಅನೇಕರು ಇಷ್ಟ ಪಟ್ಟು ತಿನ್ನುತ್ತಾರೆ.
ಅವರೆಕಾಳಿನಿಂದ ಪಲ್ಯ, ಪಲಾವ್, ಸಾಂಬಾರ ಸೇರಿದಂತೆ ಅನೇಕ ಖಾದ್ಯ ತಯಾರಿಸಲಾಗುತ್ತದೆ.
ಅವರೆಕಾಳಿನಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ಮ್ಯಾಂಗನೀಸ್, ಫೈಬರ್ ಇರುತ್ತವೆ.
ಅವರೆಕಾಳು ತೂಕ ಇಳಿಕೆಗೆ ಸಹಕಾರಿ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ ಇದಾಗಿದೆ.
ಅವರೆಕಾಳಿನಲ್ಲಿ ಅಧಿಕ ವಿಟಮಿನ್ ಸಿ ಇರುವ ಕಾರಣ ಇದು ಚರ್ಮದ ಆರೋಗ್ಯವನ್ನು ವೃದ್ದಿಸುತ್ತದೆ.
ಅವರೆಕಾಳು ಕಣ್ಣಿನ ಆರೋಗ್ಯಕ್ಕೂ ಪ್ರಯೋಜನ ನೀಡುತ್ತದೆ. ಕ್ಯಾನ್ಸರ್ ಅಪಾಯವನ್ನೂ ಅವರೆಕಾಳು ಕಡಿಮೆ ಮಾಡುತ್ತದೆ.
ಅವರೆಕಾಳಿನ ಸೇವನೆ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ.
ಶ್ವಾಸಕೋಶದ ಆರೋಗ್ಯಕ್ಕೂ ಅವರೆಕಾಳು ಸಹಕಾರಿಯಾಗಿದೆ. ನಿದ್ರಾಹೀನತೆಯಿಂದ ಬಳಲುವವರು ಅವರೆಕಾಳು ಸೇವಿಸಬೇಕು.
ಮೆದುಳಿನ ಆರೋಗ್ಯ ವೃದ್ದಿ, ರಕ್ತದೊತ್ತಡ ನಿಯಂತ್ರಣ, ಮೂಳೆಗಳನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ.