2025ರ ವರ್ಷಪೂರ್ತಿ ಯಾವ್ಯಾವ ಭಯಾನಕ ಘಟನೆಗಳು ಸಂಭವಿಸುತ್ತವೆ ಎಂಬುದರ ಬಗ್ಗೆ ಅವರು ಮೊದಲೇ ಊಹಿಸಿದ್ದರು.
ಯುದ್ಧಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು, ಆರ್ಥಿಕ ವ್ಯವಸ್ಥೆಯ ಬಗ್ಗೆ ವಂಗಾ ಹೇಳಿದ್ದೆಲ್ಲವೂ ಸತ್ಯವಾಗುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗ, 1990ರ ದಶಕದ ಕೊಲ್ಲಿ ಯುದ್ಧ ಸೇರಿದಂತೆ ಅನೇಕ ನೈಸರ್ಗಿಕ ಪ್ರಕೋಪಗಳ ಬಗ್ಗೆ ವಂಗಾ ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿವೆ.
2025ರಲ್ಲಿ ಯುದ್ಧದ ಜೊತೆಗೆ ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ವಂಗಾ ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಗಳನ್ನ ಅಸ್ಥಿರಗೊಳಿಸುವ ನೀತಿಗಳು ಮತ್ತು ಕೃತ್ಯಗಳಿಂದ ಭೌಗೋಳಿಕ ರಾಜಕೀಯ ಅಸ್ಥಿರತೆ ಉಂಟಾಗಲಿದೆಯಂತೆ.
ದೊಡ್ಡ ದೇಶಗಳ ನಡುವಿನ ಉದ್ವಿಗ್ನ ಸಂಬಂಧಗಳು ಈಗಾಗಲೇ ಜಾಗತಿಕ ಆರ್ಥಿಕತೆಯಲ್ಲಿ ಒತ್ತಡವನ್ನುಂಟುಮಾಡುತ್ತಿವೆ. ಉದಾಹರಣೆಗೆ ಅಮೆರಿಕವು ಚೀನಾದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿರುವುದು.
2025ರಲ್ಲಿ ಸಂಘರ್ಷದ ಜೊತೆಗೆ ವಿಶ್ವದಾದ್ಯಂತ ಆರ್ಥಿಕ ಕುಸಿತದ ಬಗ್ಗೆ ವಂಗಾ ಭವಿಷ್ಯ ನುಡಿದಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯ ಕುಸಿತ ಕಾಣಲಿದ್ದು, ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆಯಂತೆ.
ಬಾಬಾ ವಂಗಾ ಅವರು 2025ರ ವಿನಾಶಕಾರಿ ಭೂಕಂಪಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈಗಾಗಲೇ ರಷ್ಯಾ ಮತ್ತು ಜಪಾನ್‌ನಲ್ಲಿ ಸಂಭವಿಸಿರುವ ಭೂಕಂಪ ಮತ್ತು ಸುನಾಮಿಗಳೇ ಇದಕ್ಕೆ ಸಷ್ಟ ನಿದರ್ಶನ.