ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಾಲಿನ ಜೊತೆ ತಿನ್ನಬಾರದ ಕೆಲವು ಪದಾರ್ಥಗಳಿವೆ.
ಮಕ್ಕಳಿಗೆ ಚಾಕಲೇಟ್ ಹಾಲು ಎಂದರೆ ಇಷ್ಟ. ಹೀಗಾಗಿ ಅಮ್ಮಂದಿರು ಕೂಡಾ ಬೇರೆ ಬೇರೆ ಫ್ಲೇವರ್ ಪೌಡರ್ ಅನ್ನು ಹಾಲಿನೊಂದಿಗೆ ಬೆರೆಸಿ ಕುಡಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಕಾಫಿ ಮತ್ತು ಚಹಾವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಆದರೆ ಹಾಲಿನೊಂದಿಗೆ ಕೆಫಿನ್ ಬೆರೆಸುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಲಿಗೆ ಸಕ್ಕರೆ ಹಾಕಿ ಕುಡಿಯುವುದು ಸಾಮಾನ್ಯ ಮಾತು. ಆದರೆ ಹಾಲಿಗೆ ಸಕ್ಕರೆ ಹಾಕಿ ಕುಡಿಯುವುದರಿಂದ ತೂಕ ಹೆಚ್ಚಳ ಮತ್ತು ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾದೆ. ಹೊಟ್ಟೆಯಲ್ಲಿ ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್, ಕರಿದ ತಿಂಡಿಗಳ ಜೊತೆಗೆ ಹಾಲು ಕುಡಿಯಬಾರದು.
ಹಾಲಿನ ಜೊತೆಗೆ ಸಿಟ್ರಿಕ್ ಹಣ್ಣುಗಳನ್ನು ತಿನ್ನಬಾರದು. ಇದು ಜೀರ್ಣ ಕ್ರಿಯೆಯಲ್ಲಿ ಸಮಸ್ಯೆ ಉಂಟು ಮಾಡುತ್ತದೆ.
ಹಾಲಿನೊಂದಿಗೆ ಈ ಹಣ್ಣುಗಳನ್ನು ಸೇವಿಸುವುದರಿಂದ ದೂರವಿರಬೇಕು.