ಮೊಸರಿನಲ್ಲಿ ಅನೇಕ ಪೋಷಕ ತತ್ವ ಅಡಗಿದೆ. ಆದ್ರೆ ಇದನ್ನು ಕೆಲವೊಂದು ವಸ್ತುಗಳ ಜೊತೆ ಸೇವಿಸಬಾರದು.
ಮೊಸರನ್ನು ಹಾಲಿನೊಂದಿಗೆ ಸೇವಿಸಬಾರದು. ಇವೆರಡನ್ನೂ ಒಟ್ಟಿಗೆ ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಕೋಳಿ, ಮಾಂಸ ಖಾದ್ಯ ತೋರಿಸುವಾಗ ಕೆಲವರು ಮೊಸರು ಸೇರಿಸುತ್ತಾರೆ. ಆದರೆ ಇದು ಉದರದ ಸಮಸ್ಯೆ ಉಂಟು ಮಾಡುತ್ತದೆ.
ಮೊಸರಿನ ಜೊತೆ ಮೀನು ಸೇವಿಸಬಾರದು. ಮೀನು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ.
ಮೊಸರಿನ ಗುಣ ತಣ್ಣಗೆ ಮತ್ತು ಮಾವಿನ ಗುಣ ಉಷ್ಣ. ಹಾಗಾಗಿ ಇವೆರಡನ್ನೂ ಒಟ್ಟಿಗೆ ಸೇವಿಸಬಾರದು.
ಹೆಚ್ಚಿನವರು ಮೊಸರಿನ ಜೊತೆಗೆ ಈರುಳ್ಳಿ ಸೇವಿಸುತ್ತಾರೆ.ಅದು ಆರೋಗ್ಯಕ್ಕೆ ಭಾರೀ ನಷ್ಟವನ್ನು ಉಂಟು ಮಾಡುತ್ತದೆ.ಇದರಿಂದ ವಾಂತಿ, ಗ್ಯಾಸ್, ಅಲರ್ಜಿ ಇತ್ಯಾದಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಮೊಸರು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಬಾರದು. ಇವೆರಡನ್ನೂ ಒಟ್ಟಿಗೆ ತಿಂದರೆ ಕಫ ಹೆಚ್ಚಾಗುತ್ತದೆ.
ಮೊಸರಿನ ಜೊತೆ ಹುಳಿ ಹಣ್ಣನ್ನು ಸೇವಿಸಬಾರದು. ಇದರಿಂದ ಜೀರ್ಣಕಾರಿ ಸಮಸ್ಯೆ ಉಂಟಾಗಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.