ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರಲ್ಲಿ ಬೊಜ್ಜಿನ ಸಮಸ್ಯೆ ಕಾಮನ್ ಆಗಿದೆ.
ಡೊಳ್ಳು ಹೊಟ್ಟೆಯಿಂದ ಅನೇಕರು ಮುಜುಗರ ಅನುಭವಿಸುತ್ತಾರೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ.
ಅಧಿಕ ತೂಕದ ಸಮಸ್ಯೆಯಿಂದ ಪಾರಾಗಲು ಅನೇಕರು ವಿವಿಧ ರೀತಿಯ ಸರ್ಕಸ್ ಮಾಡುತ್ತಾರೆ.
ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಪ್ರತಿದಿನ ನಿಂಬೆ ಜ್ಯೂಸ್ ಸೇವಿಸಬೇಕು.
ತೂಕ ನಷ್ಟಕ್ಕೆ ಪ್ರತಿಯೊಬ್ಬರೂ ಸಕ್ಕರೆ, ಮೈದಾ ಮತ್ತು ಉಪ್ಪು ಸೇವಿಸುವುದನ್ನು ನಿಲ್ಲಿಸಬೇಕು.
ಅತಿಯಾಗಿ ಆಹಾರ ಸೇವನೆ & ಜಂಕ್ ಫುಡ್ ಸೇವನೆಯಿಂದ ಆದಷ್ಟು ದೂರವಿರಬೇಕು.
ಪ್ರತಿದಿನವೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡರೆ ತೂಕ ನಷ್ಟ ಮಾಡಿಕೊಳ್ಳಬಹುದು.
ಜೀವನಶೈಲಿಯಲ್ಲಿ ಬದಲಾವಣೆ & ಆರೋಗ್ಯಕರ ಆಹಾರ ಸೇವನೆಯಿಂದ ತೂಕ ನಷ್ಟಕ್ಕೆ ಸಹಕಾರಿ.