ಜೀರಿಗೆಯ ಪ್ರಮುಖ ಪ್ರಯೋಜನಗಳು- ಅಡ್ಡಪರಿಣಾಮಗಳು
ಜೀರಿಗೆ ಪ್ರತಿ ಭಾರತೀಯ ಅಡುಗೆ ಮನೆಗಳಲ್ಲಿ ಕಂಡು ಬರುವ ಪ್ರಮುಖ ಮಸಾಲೆ. ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ. ಆದರೆ, ಕೆಲವರಿಗೆ ಇದು ಅಪಾಯಕಾರಿ ಎಂತಲೂ ಸಾಬೀತುಪಡಿಸಬಹುದು.
ನಿಮ್ಮ ಫೇಸ್ ಪ್ಯಾಕ್‌ನಲ್ಲಿ ಚಿಟಿಕೆ ಜೀರಿಗೆಯನ್ನು ಸೇರಿಸಿ ಬಳಸಿದರೆ ಹೊಳೆಯುವ ಚರ್ಮವನ್ನು ಪಡೆಯಬಹುದು. ಆದರೆ, ಎಚ್ಚರ, ಹಾಗಂತ ಅತಿಯಾಗಿ ಬಳಸಿದಸ್ರೆ ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.
ಜೀರಿಗೆ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಅತಿಯಾದ ಜೀರಿಗೆ ಬಳಕೆಯಿಂದ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗಬಹುದು.
ಕೂದಲು ಉದುರುವ ಸಮಸ್ಯೆ ಇದ್ದರೆ ಕಪ್ಪು ಜೀರಿಗೆ ಎಣ್ಣೆಯನ್ನು ಬೆರೆಸಿದ ಎಣ್ಣೆಯನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಅನ್ವಯಿಸಿ.
ಜೀರಿಗೆ ಬಳಕೆಯಿಂದ ಚರ್ಮದ ಸೋಂಕುಗಳಿಂದ ಮುಕ್ತಿ ಪಡೆಯಬಹುದು.
ಆಯುರ್ವೇದದ ಪ್ರಕಾರ, ಹಾಲುಣಿಸುವ ಮಹಿಳೆಯರು ಜೀರಿಗೆ ಸೇವಿಸಬಾರದು.ಇದು ನವಜಾತ ಶಿಶುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಜೀರಿಗೆಯ ಅತಿಯಾದ ಸೇವನೆಯು ಗರ್ಭಪಾತ ಅಥವಾ ಅಕಾಲಿಕ ಹೆರಿಗೆಗೆ ಕಾರಣವಾಗಬಹುದು.
ಮಧುಮೆಹಿಗಳಿಗೆ ಅತಿಯಾದ ಜೀರಿಗೆ ಬಳಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಜೀರಿಗೆ ವರದಾನವಿದ್ದಂತೆ.
ಜೀರಿಗೆಯನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಸ್ನಾನ ಮಾಡುವ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಜೀರಿಗೆ ಬಳಕೆಯಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.