ಪೋಷಕಾಂಶಗಳ ಉಗ್ರಾಣ ಕಾಯಿ ಪಪ್ಪಾಯ: ತಿಂದರೆ ದೇಹಕ್ಕೆ ಸಿಗುವುದು ಇಷ್ಟೆಲ್ಲಾ ಪ್ರಯೋಜನ

Bhavishya Shetty
Apr 26,2024

ಪೋಷಕಾಂಶಗಳ ಉಗ್ರಾಣ

ಪಪ್ಪಾಯಿಯನ್ನು ಆರೋಗ್ಯದ ನಿಧಿ ಎಂದು ಕರೆಯಲಾಗುತ್ತದೆ. ಇದು ಅನೇಕ ಪೋಷಕಾಂಶಗಳ ಉಗ್ರಾಣವಾಗಿದೆ. ಆದರೆ ಹಣ್ಣಿಗಿಂತ, ಕಾಯಿ ಪಪ್ಪಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

ಜೀರ್ಣಾಂಗ ವ್ಯವಸ್ಥೆ

ಕಾಯಿ ಪಪ್ಪಾಯಿಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಜೀರ್ಣಕಾರಿ ಸಮಸ್ಯೆ

ಕಾಯಿ ಪಪ್ಪಾಯಿಯನ್ನು ಸೇವಿಸುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತದೆ.

ತೂಕ ಇಳಿಕೆ

ಕಾಯಿ ಪಪ್ಪಾಯಿಯು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಹೀಗಾಗಿ ಇದನ್ನು ತಿನ್ನುವ ಮೂಲಕ ಸುಲಭವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.

ಕರುಳಿನ ಚಲನೆ

ಕಾಯಿ ಪಪ್ಪಾಯಿಯನ್ನು ತಿನ್ನುವುದರಿಂದ ಕರುಳಿನ ಚಲನೆಯು ಸುಲಭವಾಗುತ್ತದೆ. ಇದನ್ನು ಬೇಯಿಸಿ ತಿನ್ನಬಹುದು ಅಥವಾ ಬೇಕಿದ್ದರೆ ಸಲಾಡ್ ರೂಪದಲ್ಲಿಯೂ ತಿನ್ನಬಹುದು.

ಕಣ್ಣುಗಳು

ಕಾಯಿ ಪಪ್ಪಾಯಿಯನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ಸಾಕಷ್ಟು ಪ್ರಮಾಣದ ಕ್ಯಾರೊಟಿನಾಯ್ಡ್ಗಳನ್ನು ಇದರಲ್ಲಿದ್ದು, ಕಣ್ಣುಗಳು ಆರೋಗ್ಯಕರವಾಗಿರುತ್ತವೆ.

ಮೊಡವೆ

ಕಾಯಿ ಪಪ್ಪಾಯಿಯು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಕಲೆಗಳು ಅಥವಾ ಮೊಡವೆಗಳಿಂದ ತೊಂದರೆಗೊಳಗಾಗಿದ್ದರೆ, ಇದನ್ನು ಸೇವಿಸಿ.

ಸೂಚನೆ:

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story