ಮಸಾಲೆಯಾಗಿ ಬಳಸುವ ಜೀರಿಗೆ ಆರೋಗ್ಯ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.
ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆ ಹಾಕಿಟ್ಟು ರಾತ್ರಿಯಿಡೀ ನೆನೆಸಿಡಿ. ಈ ನೀರನ್ನು ಬೆಳಿಗ್ಗೆ ಕುದಿಸಿ ಸೇವಿಸಬೇಕು, ಅಗತ್ಯವಿದ್ದರೆ ಅದಕ್ಕೆ ಜೇನು ತುಪ್ಪ ಸೇರಿಸಬಹುದು.
ರಾತ್ರಿ ಜೀರಿಗೆ ನೆನೆಸಿಡುವುದು ಮರೆತರೆ ಹಾಗೆಯೇ ಜೀರಿಗೆ ನೀರಿನಲ್ಲಿ ಹಾಕಿ ಕುದಿಸಿ ನೀರನ್ನು ಸೇವಿಸಬಹುದು. ನಿತ್ಯ ಹೀಗೆ ಮಾಡಿದರೆ ಸಿಗುವ ಆರೋಗ್ಯ ಲಾಭ ಅಷ್ಟಿಷ್ಟಲ್ಲ.
ಜೀರಿಗೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಜೀರಿಗೆ ನೀರು ಕುಡಿಯುವುದರಿಂದ ತೂಕ ಇಳಿಕೆ ಪ್ರಕ್ರಿಯೆ ಕೂಡಾ ಸುಲಭವಾಗಲಿದೆ.
ದೇಹದಲ್ಲಿರುವ ಕಲ್ಮಶಗಳಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆ ಕಾಡಬಹುದು. ಇದು ದೇಹದ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಜೀರಿಗೆ ನೀರು ಉತ್ತಮ ಟಾಕ್ಸಿಕ್ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಜೀರಿಗೆ ನೀರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.