ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

Ranjitha R K
Mar 13,2024

ಬೆಳ್ಳುಳ್ಳಿ ಪ್ರಯೋಜನ

ಬೆಳ್ಳುಳ್ಳಿ ಅಡುಗೆಯ ರುಚಿಯನ್ನುಹೆಚ್ಚಿಸುತ್ತದೆ. ಇದರ ಜೊತೆ ಇದು ಅನೇಕ ಔಷಧೀಯ ಗುಣಗಳನ್ನು ಕೂಡಾ ಹೊಂದಿದೆ.

ರೋಗ ನಿರೋಧಕ ಶಕ್ತಿ

ಬೆಳ್ಳುಳ್ಳಿಯಲ್ಲಿರುವ ಆಂಟಿ ಫಂಗಲ್, ಆಂಟಿ ವೈರಲ್, ಮತ್ತು ಆಂಟಿ ಬ್ಯಾಕ್ಟಿರಿಯಲ್ ಗುಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ಪರಿಹಾರ

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ. ಇದು ಹೃದಯದ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.

ಅಂಗಾಂಗಗಳ ಕಾರ್ಯ ನಿರ್ವಹಣೆ

ಬೆಳ್ಳುಳ್ಳಿ ದೇಹದಲ್ಲಿ ಸೇರಿಕೊಂಡಿರುವ ಕಲ್ಮಷಗಳನ್ನು ಹೊರ ಹಾಕುತ್ತದೆ. ಇದರಿಂದ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ.

ಚಯಾಪಚಯ ಸುಧಾರಣೆ

ಬೆಳ್ಳುಳ್ಳಿ ಚಯಾಪಚಯವನ್ನು ಸುಧಾರಿಸುತ್ತದೆ. ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.

ವೈರಲ್ ಫ್ಲೂ ಪರಿಹಾರ

ಬೆಳ್ಳುಳ್ಳಿ ಟೀ ಸೇವನೆಯಿಂದ ವೈರಲ್ ಫ್ಲೂ, ಇನ್ಫೆಕ್ಷನ್ ನಿಂದ ಪರಿಹಾರ ಸಿಗುತ್ತದೆ.

ಜೀರ್ಣಕಾರಿ ಸಮಸ್ಯೆ ದೂರ

ಬೆಳ್ಳುಳ್ಳಿ ಟೀ ಸೇವನೆಯಿಂದ ಊತದ ಸಮಸ್ಯೆ ಬಗೆಹರಿಯುತ್ತದೆ. ಜೀರ್ಣಕಾರಿ ಸಮಸ್ಯೆ ದೂರವಾಗುತ್ತದೆ.

ಬೆಳ್ಳುಳ್ಳಿ ಟೀ

6-7 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೀರಿನಲ್ಲಿ ಹಾಕಿ 10-12 ನಿಮಿಷಗಳವರೆಗೆ ಚೆನ್ನಾಗಿ ಕುದಿಸಿ. ನಂತರ ಫಿಲ್ಟರ್ ಮಾಡಿ ಸೇವಿಸಿ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story