ತೂಕ ಕಳೆದುಕೊಳ್ಳಲು ಇಚ್ಛಿಸುವವರಿಗೆ ರಾಗಿ ಒಂದು ಉತ್ತಮವಾದ ಪರ್ಯಾಯವಾಗಿದೆ. ಏಕೆಂದರೆ ಇದರಲ್ಲಿರುವ ಟ್ರಿಪ್ಟೋಫಾನ್ ಎಂಬ ಪೋಷಕಾಂಶವನ್ನು ಹೊಂದಿದೆ.
ರಾಗಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಡಿ ಈ ಕ್ಯಾಲ್ಸಿಯಂ ತನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ.
ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿ ಸೇರಿದ ಬಳಿಕ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಹೊರ ಹಾಕಿ ದೇಹವನ್ನು ಸಡಿಲಗೊಳಿಸುತ್ತದೆ.
ಮಧುಮೇಹಿಗಳಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ. ಆದ್ದರಿಂದ ಸಕ್ಕರೆ ಖಾಯಿಲೆಯಿಂದ ಬಳಲುವವರು ರಾಗಿಯಿಂದ ಮಾಡಿದ ಖಾದ್ಯಗಳನ್ನು ತಮ್ಮ ಪ್ರಮುಖ ಆಹಾರವನನು ಹೆಚ್ಚೆಚ್ಚು ಸೇಸುವುದರಿಂದ ಮಧುಮೇಹ ನಿಯಂತ್ರಣ ಬರುತ್ತದೆ.
ಮಲಬದ್ಧತೆಯ ತೊಂದರೆ ಹಾಗೂ ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು ರಾಗಿಯ ಖಾದ್ಯಗಳನ್ನು ಸೇವಿಸುವುದು ಒಳಿತು.
ರಾಗಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಗಿ ಸೇವನೆ ಉತ್ತಮ ಆಹಾರವಾಗಿದೆ.
ರಾಗಿಯು ಅಧಿಕ ನಾರಿನಾಂಶವು ಹೊಂದಿರುವುದರಿಂದರಕ್ತದೊತ್ತಡ ಕಡಿಮೆ ಮಾಡುತ್ತದೆ.