ಊಟದ ಪ್ರಮಾಣ ಹೆಚ್ಚಿರಲಿ, ಕಡಿಮೆ ಇರಲಿ, ರಾತ್ರಿ ಡಿನ್ನರ್ ಮುಗಿಸಿದ ತಕ್ಷಣ 10 ನಿಮಿಷ ವಾಕ್ ಮಾಡಿದ್ರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಸಿಗುತ್ತೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
ರಾತ್ರಿ ಊಟ ಮಾಡಿದ ತಕ್ಷಣ ಮಲಗಿದರೆ ಆಮ್ಲೀಯತೆ, ವಾಯು, ಮಲಬದ್ಧತೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ಸ್ಥೂಲಕಾಯತೆ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇನ್ನು ರಾತ್ರಿ ಊಟವಾದ ಬಳಿಕ ಮಾಡುವ ವಾಕಿಂಗ್ ಹೊಟ್ಟೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಅಷ್ಟೇ ಅಲ್ಲದೆ, ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದರ ಪರಿಣಾಮವಾಗಿ ಆಹಾರವು ವೇಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಹೊಟ್ಟೆ ಉಬ್ಬುವಿಕೆಯನ್ನು ಸಹ ಕಡಿಮೆ ಮಾಡುತ್ತದೆ,
ಸ್ಪೋರ್ಟ್ಸ್ ಮೆಡಿಸಿನ್ ನಡೆಸಿದ ಅಧ್ಯಯನ ಪ್ರಕಾರ, ಜನರು ಆಹಾರ ಸೇವಿಸಿದ ನಂತರ ಲಘುವಾದ ವಾಕಿಂಗ್ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ ಎಂದು ಹೇಳಿದೆ
ಈ ಆರೋಗ್ಯ ಪ್ರಯೋಜನ ಪಡೆಯಲು ಕೇವಲ ಎರಡರಿಂದ ಐದು ನಿಮಿಷಗಳ ಕಾಲ ಲಘು ನಡಿಗೆ ಮಾಡಬೇಕು ಎಂದು ಕೆಲವು ತಜ್ಞರು ಹೇಳುತ್ತಾರೆ.
ಊಟದ ನಂತರ ನಡೆಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ,
ಊಟದ ನಂತರ 30 ನಿಮಿಷಗಳ ನಡಿಗೆಯು ದೇಹದಲ್ಲಿ 150 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.