ಫೆನ್ನೆಲ್ ಅಥವಾ ಸೋಂಪು ಆರೋಗ್ಯ ಬಹಳಷ್ಟು ಪ್ರಯೋಜನಕಾರಿಯಾದ ಆಹಾರವಾಗಿದೆ. ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಸುಲಭವಾಗಿ ಕಾಣಸಿಗುವ ಮಸಾಲೆಯಾಗಿದೆ.
ಸೋಂಪು ಕಾಳಿನ ಜ್ಯೂಸ್ ಕುಡಿದರೆ ದೇಹ ತಂಪಾಗುವ ಜೊತೆ ಹೊಟ್ಟೆಯ ನೋವಿಗೂ ಪರಿಹಾರ ನೀಡುತ್ತದೆ.
ಈ ದೇಸಿ ಪಾನೀಯದಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು. ಫೆನ್ನೆಲ್ ಸಿರಪ್ ರುಚಿಯಲ್ಲಿಯೂ ಉತ್ತಮವಾಗಿದೆ.
ಫೆನ್ನೆಲ್ ಸಿರಪ್ ಅಥವಾ ಜ್ಯೂಸ್ ಮಾಡಲು, ಸುಮಾರು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟ ಸೋಂಪು ಕಾಳು ಅಗತ್ಯ. ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಕಪ್ಪು ಉಪ್ಪು, ಸಕ್ಕರೆ ಮತ್ತು ಸ್ವಲ್ಪ ನೀರು ಸೇರಿಸಿ.
ಅಗತ್ಯವಿದ್ದರೆ ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಇದನ್ನು ಫಿಲ್ಟರ್ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ ಇನ್ನಷ್ಟು ರುಚಿ ಹೆಚ್ಚಿಸಲು ಇದಕ್ಕೆ ನಿಂಬೆ ರಸ ಕೂಡ ಸೇರಿಸಬಹುದು,
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.