ಮಲಬದ್ಧತೆ ನಮ್ಮ ಹಸಿವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಮ್ಮ ದೇಹದಲ್ಲಿ ಇತರ ಕಾಯಿಲೆಗಳನ್ನು ಉಂಟುಮಾಡುತ್ತದೆ.
ಮಲಬದ್ಧತೆಯಿಂದ ಪೈಲ್ಸ್, ಗ್ಯಾಸ್, ಅಸಿಡಿಟಿ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಇದರಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...
ಬಿಸಿ ಹಾಲು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಮಲಬದ್ಧತೆ ಸಮಸ್ಯೆಗೆ ಕಿತ್ತಳೆ ಹಣ್ಣಿನ ರಸ ಸಹ ಅತ್ಯುತ್ತಮ ಪರಿಹಾರ. ಆದರೆ, ಇದಕ್ಕೆ ಯಾವುದೇ ಮಸಾಲೆ, ಉಪ್ಪನ್ನು ಸೇರಿಸಬೇಡಿ.
ನಿಂಬೆಹಣ್ಣಿನ ಜ್ಯೂಸ್ ಎಂದರೆ ಶರಬತ್ತು ಕುಡಿಯುವುದರಿಂದ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ.
ರಾತ್ರಿಯಿಡೀ ತಾಂಪ್ರದ ಪಾತ್ರೆಯಲ್ಲಿ ನೀರು ಇಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದಲೂ ಮಲಬದ್ಧತೆಯಿಂದ ಪರಿಹಾರ ಪಡೆಯಬಹುದು.
ನಿತ್ಯ ಊಟವಾದ ನಂತರ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದಲೂ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.