Cracked Heel Remedies: ಒಡೆದ ಹಿಮ್ಮಡಿಯನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ ಈ ಮನೆಮದ್ದುಗಳು!
ದಿನನಿತ್ಯ ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸಿದರೆ ಒಡೆದ ಹಿಮ್ಮಡಿಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ಅಲೋವೆರಾ ಒಡೆದ ಹಿಮ್ಮಡಿ ಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಅಲೋವೆರಾ ಮತ್ತು ಸಕ್ಕರೆ ಬೆರೆಸಿ ಸ್ಕ್ರಬ್ ಮಾಡಿದರೆ ಸತ್ತ ಚರ್ಮ ಹೋಗುತ್ತದೆ.
ನಿಮ್ಮ ಒಡೆದ ಹಿಮ್ಮಡಿಗಳಿಗೆ ಕಲ್ಲು ಉಪ್ಪು ತುಂಬಾ ಪ್ರಯೋಜನಕಾರಿ.
ಬಿಸಿ ನೀರಿಗೆ ಕಲ್ಲು ಉಪ್ಪನ್ನು ಸೇರಿಸಿ, ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಡಬೇಕು.
ಉತ್ತಮ ನೈಸರ್ಗಿಕ ಪರಿಹಾರವೆಂದರೆ ಬೇವು ಮತ್ತು ಅರಿಶಿನ ಪೇಸ್ಟ್. ಅದು ತುಂಬಾ ಪ್ರಯೋಜನಕಾರಿಯಾಗಿದೆ.
ಅರಿಶಿನ ಮತ್ತು ಬೇವಿನ ಎಲೆಗಳು ಹೆಚ್ಚಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದು ನಿಮ್ಮ ಒಡೆದ ಹಿಮ್ಮಡಿ ಸಮಸ್ಯೆಯನ್ನು ಪರಿಹರಿಸುತ್ತದೆ.
ತೆಂಗಿನ ಎಣ್ಣೆ ಚರ್ಮಕ್ಕೆ ತುಂಬಾ ಒಳ್ಳೆಯದು. ಹಿಮ್ಮಡಿಗಳು ಮೃದುವಾಗಲು ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳಿ.
ಮಾಗಿದ ಬಾಳೆಹಣ್ಣನ್ನು ಸಹ ಬಳಸಬಹುದು. ಬಾಳೆಹಣ್ಣು ನಿಮ್ಮ ಹಿಮ್ಮಡಿಗಳನ್ನು ಮೃದುಗೊಳಿಸುತ್ತದೆ. ಆದರೆ ಅದನ್ನು ಕೇವಲ 15 ನಿಮಿಷಗಳ ಕಾಲ ಇರಿಸಿ.
ಒಡೆದ ಹಿಮ್ಮಡಿಗಳಿಂದ ಮುಕ್ತಿ ಪಡೆಯಲು ಪ್ರತಿದಿನ 15-20 ನಿಮಿಷಗಳ ಕಾಲ ಬೆಚ್ಚಗಿನ ನೀರು ಮತ್ತು ಅಡಿಗೆ ಸೋಡಾದ ಮಿಶ್ರಣದಲ್ಲಿ ನಿಮ್ಮ ಪಾದಗಳನ್ನು ಇರಿಸಿ.