ಗಂಟಲು ಕಿರಿಕಿರಿಯೇ? ಹಾಗಾದ್ರೆ ಪ್ರತಿದಿನ ಈ ದೇಶಿ ಕಷಾಯ ಕುಡಿಯಿರಿ

Bhavishya Shetty
Nov 30,2023

ಆರೋಗ್ಯ ಕಾಳಜಿ

ವಾತಾವರಣ ಬದಲಾಗುತ್ತಿದೆ. ಇನ್ನೇನು ಚಳಿಗಾಲ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ, ಶೀತ, ಕೆಮ್ಮು ಮತ್ತು ಗಂಟಲು ಸೋಂಕು ತುಂಬಾ ಸಾಮಾನ್ಯ. ಅಂತಹ ವಾತಾವರಣದಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಲು ಸಂಪೂರ್ಣ ಕಾಳಜಿ ವಹಿಸುವುದು ಮುಖ್ಯ.

ನೈಸರ್ಗಿಕ ವಿಧಾನ

ಗಂಟಲಿನ ಸೋಂಕಿನ ಸಮಸ್ಯೆ ಶೀತ ಮತ್ತು ಕೆಮ್ಮಿನಿಂದ ಉಂಟಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, ಬ್ಯಾಕ್ಟೀರಿಯಾದ ಸೋಂಕು ಕೂಡ ಕಾರಣವಾಗಬಹುದು. ಈ ಸಮಸ್ಯೆ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡುವುದು ಉತ್ತಮ.

ಮನೆಮದ್ದು

ಆದರೆ, ಸಮಸ್ಯೆ ಉಲ್ಬಣಗೊಂಡರೆ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲಿ ನಾವು ಕೆಲವು ಮನೆಮದ್ದುಗಳನ್ನು ಹೇಳುತ್ತಿದ್ದೇವೆ, ಅದರ ಮೂಲಕ ನೀವು ನೈಸರ್ಗಿಕ ರೀತಿಯಲ್ಲಿ ಗಂಟಲಿನ ಸೋಂಕನ್ನು ತೊಡೆದುಹಾಕಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿದ್ದು, ನಂಜುನಿರೋಧಕ ಗುಣಗಳನ್ನು ಹೊಂದಿದೆ. ಗಂಟಲಿನ ಸೋಂಕನ್ನು ಗುಣಪಡಿಸಲು ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಪ್ರಯೋಜನಕಾರಿ

ಉಪ್ಪು ಮತ್ತು ನೀರು

ಉಪ್ಪು ಮತ್ತು ನೀರಿನಿಂದ ಗಾರ್ಗಿಲ್ ಮಾಡಿದರೆ, ಗಂಟಲಿನ ಸೋಂಕು ಮತ್ತು ಅದರಿಂದ ಉಂಟಾಗುವ ನೋವಿನಿಂದ ಪರಿಹಾರವನ್ನು ಪಡೆಯಬಹುದು

ಅರಿಶಿಣ

ಅರಿಶಿಣವು ಉತ್ಕರ್ಷಣ ನಿರೋಧಕಗಳೊಂದಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಈ ಮಸಾಲೆ ಸೋಂಕುಗಳನ್ನು ಗುಣಪಡಿಸುವ ಔಷಧವಾಗಿ ಕಂಡುಬರುತ್ತದೆ. ಗಂಟಲಿನ ಸೋಂಕು ಮತ್ತು ಕಫವನ್ನು ಹೋಗಲಾಡಿಸಲು ಬಿಸಿ ಹಾಲಿನಲ್ಲಿ ಅರ್ಧ ಚಮಚ ಅರಿಶಿನವನ್ನು ಬೆರೆಸಿ ಕುಡಿಯಿರಿ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story