ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ, ಯೂರಿಕ್ ಆಸಿಡ್ ಕೀಲುಗಳ ಸುತ್ತಲೂ ಹರಳುಗಳ ರೂಪದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.
ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧು, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಗೂ ಇದು ಕಾರಣವಾಗುತ್ತದೆ. ಹಾಗಾಗಿ ಯೂರಿಕ್ ಆಸಿಡ್ ಅನ್ನು ಕರಗಿಸುವುದು ಬಹಳ ಮುಖ್ಯ.
ಕೆಲವು ಮನೆಮದ್ದುಗಳ ಸಹಾಯದಿಂದ ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಅನ್ನು ಕರಗಿಸಿ ದೇಹದಿಂದ ಹೊರ ಹಾಕುತ್ತದೆ.
ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹಸಿ ಪಪ್ಪಾಯ ತುಂಬಾ ಪ್ರಯೋಜನಕಾರಿ. ಇದು ವಿಟಮಿನ್ ಎ, ವಿಟಮಿನ್ ಸಿ, ಫೈಬರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೊಂದಿದ್ದು, ಇದು ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದು ಪಪೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಉರಿಯೂತ ನಿವಾರಕವಾಗಿದೆ. ಇದು ರಕ್ತದಲ್ಲಿ ಯೂರಿಕ್ ಆಸಿಡ್ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾದ ವಿಷವನ್ನು ಸುಲಭವಾಗಿ ಹೊರಹಾಕಲಾಗುತ್ತದೆ.
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ಹಸಿ ಪಪ್ಪಾಯದ ಕಷಾಯವನ್ನು ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ಇದಕ್ಕಾಗಿ ಹಸಿ ಪಪ್ಪಾಯವನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಈ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಸುಮಾರು 5 ನಿಮಿಷ ಬೇಯಿಸಿ. ಇದಾದ ನಂತರ, ಅದನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ. ಈಗ ಈ ಕಷಾಯವನ್ನು ಶೋಧಿಸಿ ಕಲ್ಲು ಉಪ್ಪು ಸೇರಿಸಿ ಕುಡಿಯಿರಿ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.