ವಿಟಮಿನ್ ಬಿ 12 ಕೊರತೆಗೆ 5 ಅತ್ಯುತ್ತಮ ಸಸ್ಯಾಹಾರಿ ಆಹಾರಗಳು

Bhavishya Shetty
Dec 08,2024

ಆರೋಗ್ಯಕರ ಆಹಾರ

ಆಧುನಿಕ ಜೀವನಶೈಲಿಯಲ್ಲಿ ಬಿಡುವಿಲ್ಲದ ಜೀವನದಿಂದಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಇವೆಲ್ಲದಕ್ಕೂ ಕೆಟ್ಟ ಆಹಾರ ಪದ್ಧತಿ, ಕೆಟ್ಟ ಜೀವನಶೈಲಿ ಕಾರಣ. ಆರೋಗ್ಯಕರ ಆಹಾರದ ಕೊರತೆಯಿಂದಾಗಿ, ದೇಹಕ್ಕೆ ಅಗತ್ಯವಾದ ಜೀವಸತ್ವಗಳ ಕೊರತೆಯಿದೆ.

ಆಹಾರ

ಇದರಲ್ಲಿ ಪ್ರಮುಖವಾದದ್ದು ವಿಟಮಿನ್ ಬಿ 12. ಇದು ಕೆಂಪು ರಕ್ತ ಕಣಗಳ ರಚನೆ ಮತ್ತು ನರಮಂಡಲದ ಕಾರ್ಯನಿರ್ವಹಣೆಯಲ್ಲಿ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ವಿಟಮಿನ್ ಬಿ 12 ಕೊರತೆಯು ದೌರ್ಬಲ್ಯ, ಆಯಾಸ, ಖಿನ್ನತೆ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಈ ಆರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ವಿಟಮಿನ್ ಬಿ 12 ಕೊರತೆಯನ್ನು ದೂರ ಮಾಡಬಹುದು.

ಸೋಯಾ ಹಾಲು

ಸೋಯಾ ಹಾಲು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ವಿಟಮಿನ್ ಬಿ12 ಜೊತೆಗೆ ಪ್ರೋಟೀನ್ ಕೂಡ ಸಮೃದ್ಧವಾಗಿದೆ.

ನ್ಯೂಟ್ರೀಷನಲ್‌ ಯೀಸ್ಟ್

ನ್ಯೂಟ್ರೀಷನಲ್‌ ಯೀಸ್ಟ್ ಒಂದು ಸೂಪರ್ ಫುಡ್‌ ಆಗಿದೆ. ಇದು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು

ಧಾನ್ಯ

ಮಾರುಕಟ್ಟೆಯಲ್ಲಿ ಅನೇಕ ವಿಧದ ಧಾನ್ಯಗಳು ಲಭ್ಯವಿದೆ. ಇದರಲ್ಲಿ ವಿಟಮಿನ್ ಬಿ12 ಸಮೃದ್ಧವಾಗಿದೆ. ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ

ಪನೀರ್‌

ಪನೀರ್‌ ಪ್ರೋಟೀನ್ ಜೊತೆಗೆ ವಿಟಮಿನ್ ಬಿ12 ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಅಥವಾ ವಾರಕ್ಕೆ 3-4 ಬಾರಿ ಸೇವಿಸುವುದರಿಂದ ವಿಟಮಿನ್ ಬಿ 12 ಕೊರತೆಯಾಗುವುದಿಲ್ಲ

ಸೂಚನೆ

ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story