ಹೂಕೋಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಅಡಗಿರುತ್ತವೆ. ಈ ಸುಲಭ ತಂತ್ರಗಳ ಸಹಾಯದಿಂದ ಹೂಕೋಸಿನಲ್ಲಿರುವ ಹುಳುಗಳನ್ನು ತೆಗೆದುಹಾಕಬಹುದು.
ಹೂಕೋಸನ್ನು ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳಿ. ಹೀಗೆ ಮಾಡುವಾಗ ಅದರ ಒಳ ಗೆ ಅಡಗಿರುವ ಕೀಟಗಳು ಹೊರ ಬರುತ್ತವೆ.
ಹೂಕೋಸನ್ನು ನಲ್ಲಿಯ ಕೆಳಗಿಟ್ಟು ಸ್ವಚ್ಛ ಮಾಡಬೇಕು, ಹೀಗೆ ಮಾಡುವಾಗ ನೀರಿನ ಒತ್ತಡಕ್ಕೆ ಕೀಟಗಳು ಹೊರಗೆ ಬರುತ್ತವೆ.
ಉಪ್ಪು ಮಿಶ್ರಿತ ನೀರಿನಲ್ಲಿ ಹೂಕೋಸನ್ನು ಹಾಕಿ ಇಡುವುದರಿಂದಲೂ ಕೀಟಗಳು ಹಿರ ಬರುತ್ತವೆ.
ಬಿಸಿ ನೀರಿನಲ್ಲಿ ಹೂಕೋಸನ್ನು ಹಾಕಿಟ್ಟರೂ ಅದರ ಒಳಗೆ ಅಡಗಿರುವ ಕೀಟಗಳು ಹಿರ ಬರುತ್ತವೆ.
ಅಲ್ಲದೆ, ಐಸ್ ನೀರಿನಲ್ಲಿ ಹೂಕೋಸನ್ನು ಹಾಕಿ ಇಡುವುದರಿಂದಲೂ ಅದರ ಕೀಟಗಳು ಹಿರ ಬರುತ್ತವೆ.
ಹೂಕೋಸನ್ನು ನೀರಿನಲ್ಲಿ ನೆನೆಸಿಟ್ಟ ಮೇಲೆ ಅದನ್ನು ಒಣಗಿಸಬೇಕು. ಇಲ್ಲವಾದರೆ ಹೂಕೋಸಿನಲ್ಲಿ ನೀರು ತುಂಬಿಕೊಳ್ಳುತ್ತದೆ.
ಅರಶಿನದ ನೀರಿನಲ್ಲಿ ಹೂಕೋಸನ್ನು ಸ್ವಲ್ಪ ಹೊತ್ತು ಬಿಡುವುದರಿಂದಲೂ ಕೀಟ ಮಾಯವಾಗುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ