ವೀಳ್ಯದೆಲೆಯ ಮಹಿಳೆಯರ ಈ ಸಮಸ್ಯೆಗೆ ರಾಮಬಾಣ !

Ranjitha R K
Mar 05,2024

ವಿಶೇಷ ಮಹತ್ವ

ವೀಳ್ಯದೆಲೆಗೆ ಆಯುರ್ವೇದದಲ್ಲಿ ವಿಶೇಷ ಮಹತ್ವ ಇದೆ. ಇದು ಅನೇಕ ರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಉಸಿರಾಟ ತೊಂದರೆ

ಏನೂ ಕೆಲಸ ಮಾಡದೆಯೇ ಏರುಸಿರು ಬರುತ್ತಿದ್ದರೆ, ವೀಳ್ಯದೆಲೆಯನ್ನು ಸೇವಿಸಿ. ಉಸಿರಾಟ ತೊಂದರೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

ಮಲಬದ್ಧತೆಗೆ ಪರಿಹಾರ

ಪಿರಿಯೆಡ್ ಸಮಯದಲ್ಲಿ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ವೀಳ್ಯದೆಲೆಯನ್ನು ಜಜ್ಜಿ ತೆಂಗಿನೆಣ್ಣೆಯೊಂದಿಗೆ ಬೆರೆಸಿ ಗುದ ದ್ವಾರದ ಬಳಿ ಹಚ್ಚಿದರೆ ಈ ಸಮಸ್ಯೆ ದೂರವಾಗುತ್ತದೆ.

ನೋವು ನಿವಾರಕ

ಬಿಸಿ ನೀರಿನಲ್ಲಿ ವೀಳ್ಯದೆಲೆಯ ರಸ ಬೆರೆಸಿ ಕುಡಿಯುವುದರಿಂದ ದೇಹದ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ತಲೆ ನೋವಿಗೆ ಪರಿಹಾರ

ತಲೆ ನೋವಿನಿಂದ ಪರಿಹಾರ ಪಡೆಯಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ವೀಳ್ಯದೆಲೆಗಳನ್ನು ಸೇವಿಸಬೇಕು.

ಬ್ಲಡ್ ಶುಗರ್ ನಿಯಂತ್ರಣ

ವೀಳ್ಯದೆಲೆಯನ್ನು ಜಗಿದು ರಸ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.

ಹಲ್ಲುಗಳ ಆರೋಗ್ಯ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಅಗಿಯುವುದರಿಂದ ಹಲ್ಲುಗಳು ಆರೋಗ್ಯವಾಗಿರುತ್ತದೆ.

ಮಲಬದ್ದತೆ ನಿವಾರಣೆ

ವೀಳ್ಯದೆಲೆ ಜೀರ್ಣಾಂಗ ವ್ಯವಸ್ಥೆಗೆ ಉತ್ತಮ. ಮಲಬದ್ದತೆ, ಆಸಿಡಿಟಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ವೀಳ್ಯದೆಲೆ ಲಾಭ

ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ

VIEW ALL

Read Next Story